ಸುಳ್ಯ ಗೃಹರಕ್ಷಕ ದಳದ ಪ್ರಭಾರ ಘಟಕ ಅಧಿಕಾರಿಯಾಗಿ ಸೋಮನಾಥ್ ಎನ್.ಆರ್. ಆಯ್ಕೆ

0

ಸುಳ್ಯ ಗ್ರಹರಕ್ಷಕ ದಳದ ಘಟಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಯಂತ ಶೆಟ್ಟಿ ರವರ ನಿಧನದ ಬಳಿಕ ಘಟಕದ ಪ್ರಭಾರ ಅಧಿಕಾರಿಯಾಗಿ ಗೃಹ ರಕ್ಷಕ ದಳದ ಹಿರಿಯ ಸದಸ್ಯ ಸೋಮನಾಥ ಎನ್.ಆರ್. ರವರನ್ನು ನೇಮಿಸಲಾಗಿದೆ.
ಇಂದು ಬೆಳಿಗ್ಗೆ ಸುಳ್ಯ ಗೃಹ ರಕ್ಷಕ ದಳದ ಸಿಬ್ಬಂದಿಗಳ ವತಿಯಿಂದ ಜಯಂತ ಶೆಟ್ಟಿಯವರಿಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದ ಬಳಿಕ ಸೋಮನಾಥ ಎನ್.ಆರ್. ರವರು ಅಧಿಕಾರ ಸ್ವೀಕಾರ ವಹಿಸಿಕೊಂಡರು.