ಗುತ್ತಿಗಾರು: ದೇವಿ ಸಿಟಿ ಸಂಕೀರ್ಣದ ಸಭಾಭವನದಲ್ಲಿ ಮೊದಲ ಮದುವೆ, ಸಿಹಿತಿಂಡಿ ವಿತರಣೆ

0

ಗುತ್ತಿಗಾರಿನ ದೇವಿಪ್ರಸಾದ್ ಚಿಕ್ಮುಳಿ ಮಾಲೀಕತ್ವದ ದೇವಿ ಸಿಟಿ ಸಂಕೀರ್ಣದ ಸಭಾಭವನದಲ್ಲಿ ಮೊದಲ ಮದುವೆ ಜೂ.25 ರಂದು ನಡೆದಿದ್ದು ಮದುವೆಯಲ್ಲಿ ಸೇರಿದ್ದ ಎಲ್ಲಾ ಬಂಧುಗಳಿಗೆ ಸಿಹಿತಿಂಡಿ ವಿತರಣೆ ಮಾಡಲಾಯಿತು.

ಆರಂಭದಲ್ಲಿ ಭರತ್ ಮುಂಡೋಡಿ ಅವರು ನೂತನ ಸಭಾಭವನದಲ್ಲಿ ನೂತನ ವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳಿಗೆ ಶುಭಹಾರೈಸಿ ಸಭೆಯನ್ನು ಉದ್ದೇಶಿಸಿ ಶುಭಹಾರೈಸಿದರು. ಬಳಿಕ ಸೇರಿದ್ದ ಬಂಧುಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಈ ಸಂದರ್ಭ. ದೊಡ್ಡಣ್ಣ ಗೌಡ ಚಿಕ್ಮುಳಿ ಉಪಸ್ಥಿತರಿದ್ದರು.

ಹೇಗಿದೆ ಸಭಾಂಗಣ?
ದೇವಿ ಸಿಟಿ ಸಂಕೀರ್ಣದ ಸಭಾಭವನದಲ್ಲಿ ಬಾಲ್ಕನಿ ಸಹಿತ ಒಟ್ಟು 1200 ಆಸನಗಳ ವ್ಯವಸ್ಥೆಯಿದ್ದು, ಸಭೆ ಮತ್ತು ಶುಭ ಸಮಾರಂಭಗಳಿಗೆ ಸಭಾಭವನವನ್ನು ಸ್ಪರ್ಧಾತ್ಮಕ ದರದಲ್ಲಿ ನೀಡಲಾಗುವುದು. ವೈಕುಂಠ ಸಮಾರಾಧನೆ ಹಾಗೂ ಮತ್ತಿತರ ಕಾರ್ಯಕ್ರಮಗಳಿಗೆ ಸಣ್ಣ ಸಭಾಭವನದ ವ್ಯವಸ್ಥೆ ಇದ್ದು, ಸಸ್ಯಹಾರ ಹಾಗೂ ಮಾಂಸಹಾರ ಊಟದ ವ್ಯವಸ್ಥೆಗೆ ಪ್ರತ್ಯೇಕ ಪಾತ್ರದ ವ್ಯವಸ್ಥೆಯಿದೆ.