ಆಲೆಟ್ಟಿ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸಂಚಾರಕ್ಕೆ ಅಡಚಣೆ

0

ಹೆಚ್.ಟಿ.ಲೈನ್ ಮೇಲೆ ಬಿದ್ದ ‌ಪರಿಣಾಮ ವಿದ್ಯುತ್ ಸಂಪರ್ಕ ಕಡಿತ

ಆಲೆಟ್ಟಿ ರಸ್ತೆಯ ತಿರುವಿನಲ್ಲಿ ಇರುವ ಅಪಾಯಕಾರಿ ಬೃಹತ್ ಗಾತ್ರದ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಹೆಚ್.ಟಿ.ಲೈನಿನ ಮೇಲೆ ಮರ ಬಿದ್ದ ಕಾರಣದಿಂದ ಈ ಭಾಗಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.


ಅಂತರ್ ರಾಜ್ಯ ಸುಳ್ಯ ಆಲೆಟ್ಟಿ ಪಾಣತ್ತೂರು ಸಂಪರ್ಕದ ಮುಖ್ಯ ರಸ್ತೆ ಇದಾಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಅಪಾಯಕಾರಿ ಮರ ತೆತವುಗೊಳಿಸುವಂತೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೂ ಕಾರ್ಯ ಪೃವೃತ್ತರಾಗದಿರುವುದರಿಂದ ಘಟನೆ ಸಂಭವಿಸಿದೆ.

ಅದೃಷ್ಟವಶಾತ್ ಯಾವುದೇ ವಾಹನಗಳು ಮರ ಬೀಳುವ ಸಂದರ್ಭದಲ್ಲಿ ಸಂಚರಿಸುತ್ತಿಲ್ಲವಾಯಿತು.