ಕಿಂಡಿ ಅಣೆಕಟ್ಟುನಲ್ಲಿ ಬ್ಲಾಕ್ ಆದ ಮರ, ಕಾಡು ತೆರವುಗೊಳಿಸಿದ ವಿಪತ್ತು ಸ್ವಯಂ ಸೇವಕರು

0

ಗುತ್ತಿಗಾರಿನ ವಳಲಂಬೆ ಬಳಿ ಕಿಂಡಿ ಅಣೆಕಟ್ಟುನಲ್ಲಿ ಬ್ಲಾಕ್ ಆದ ಮರ ಕಾಡುಗಳನ್ನು ಜು.7 ರಂದು ವಿಪತ್ತು ನಿರ್ವಹಣಾ ಸ್ವಯಂ ಸೇವಕರು ತೆರವುಗೊಳಿಸಿದರು.

ವಳಲಂಬೆ ಶ್ರೀ ಶಂಖಪಾಲ ದೇವಳದ ಕೆಳಭಾಗದ ಅಣೆಕಟ್ಟು ಮತ್ತು ವಳಲಂಬೆ – ಕಲ್ಚಾರು ಬಳಿಯ ಕಿಂಡಿ ಅಣೆಕಟ್ಟು ನಲ್ಲಿ ಮರಗಳು, ಬಿದಿರು, ಬಾಳೆ ಸೋಗೆ ಇನ್ನಿತರ ಕಾಡು ತುಂಬಿದ್ದು ಅಣೆಕಟ್ಟು ನಲ್ಲಿ ಸಿಲುಕಿ ನದಿ ನೀರು ತೋಟಗಳಿಗೆ ನುಗ್ಗಿತ್ತು ಇದನ್ನು ಮನಗಂಡ ವಿಪತ್ತು ಸ್ವಯಂ ಸೇವಕರಾದ ಲೋಕೇಶ್ವರ ಡಿ ಆರ್, ಜಯರಾಮ ಪೈಕ ಸತೀಶ್ ಮೂಕಮಲೆ, ದೀಕ್ಷಿತ್ ಎನ್ ಎಲ್, ಓಂಕಾರ ಡಿ ಆರ್, ಸುಬ್ರಹ್ಮಣ್ಯ ಪೈಕ, ಜಗದೀಶ ಪೈಕ, ಸುಧೀರ್ ನಡುಮನೆ, ಒಕ್ಕೂಟದ ಅಧ್ಯಕ್ಷರಾದ ಕಿಶನ್ ನಡುಮನೆ, ಹಿರಿಯರಾದ ಜಯರಾಂ ನಡುಮನೆ, ಸೇರಿಕೊಂಡು ಕಸ ಕಡ್ಡಿ ತೆರವು ಮಾಡಿದರು.

ನದಿ ನೀರು ಸರಾಗವಾಗಿ ಹೋಗುವಂತೆ ಶ್ರಮ ಸೇವೆ ನಡೆಸಿದರು.


ಈ ಸಂದರ್ಭದಲ್ಲಿ ವಳಲಂಬೆ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಲೋಕೇಶ್ವರಿ ಕಾಡು ಕೊಲ್ಕ. ರವರು ಉಪಸ್ಥಿತರಿದ್ದರು.