ರಾಜ್ಯ ಮಟ್ಟದ ಅತ್ಯುತ್ತಮ ಕನ್ನಡ ಶಾಲೆ ಪ್ರಶಸ್ತಿ ಪುರಸ್ಕೃತ ಕೋಲ್ಚಾರು ಶಾಲೆಯಲ್ಲಿ ಸಂಭ್ರಮಾಚರಣೆ

0

ಸುಳ್ಯ ನಗರದಲ್ಲಿ ಕಾಲ್ನಡಿಗೆಯ ಮೆರವಣಿಗೆ, ಕೋಲ್ಚಾರು ತನಕ ವಾಹನ ಜಾಥಾ

ಶಾಲೆಗೆ ನೂತನ ಪ್ರವೇಶ ದ್ವಾರದ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಆಲೆಟ್ಟಿ ಗ್ರಾಮದ ಕೋಲ್ಚಾರು ಸ.ಉ.ಹಿ.ಪ್ರಾಥಮಿಕ ಶಾಲೆಗೆಹೆಚ್.ಜಿ.ಗೋವಿಂದೇಗೌಡ ರವರ ಹೆಸರಿನಲ್ಲಿ ಕೊಡಮಾಡಲ್ಪಡುವ ರಾಜ್ಯ ಮಟ್ಟದ ಅತ್ಯುತ್ತಮ ಕನ್ನಡ ಶಾಲೆ ಎಂಬ ಪ್ರಶಸ್ತಿ ಲಭಿಸಿರುವುದರ ಹಿನ್ನೆಲೆಯಲ್ಲಿ ಶಾಲೆಯ ವಠಾರದಲ್ಲಿ ಸೆ.10 ರಂದು ಸಂಭ್ರಮಿಸಲಾಯಿತು.

ಬೆಳಗ್ಗೆ ಸುಳ್ಯದ ಶಾಸ್ತ್ರಿ ವೃತ್ತದ ಬಳಿಯಿಂದ ಕಾಲ್ನಡಿಗೆಯ ಮೆರವಣಿಗೆಯು ಸುಳ್ಯದ ಪ್ರಮುಖ ರಸ್ತೆಯಲ್ಲಿ ಸಾಗಿ ಬಂತು. ಗಾಂಧಿನಗರ ದಿಂದ ವಾಹನ ಜಾಥಾದ ಮೂಲಕ ಕೋಲ್ಚಾರಿಗೆ ಮೆರವಣಿಗೆ ಆಗಮಿಸಿತು.


ಬಳಿಕ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಸುದರ್ಶನ ಪಾತಿಕಲ್ಲು ರವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಾರಂಭ ನಡೆಯಿತು.
ಮುಖ್ಯ ಅಭ್ಯಾಗತರಾಗಿ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ , ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ , ಸ.ಪ.ಪೂ ಕಾಲೇಜ್ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಪಂ.ಸದಸ್ಯರಾದ ದಿನೇಶ್ ಕಣಕ್ಕೂರು,
ಶ್ರೀಮತಿ ಗೀತಾ ಕೋಲ್ಚಾರು, ಧರ್ಮಪಾಲ ಕೊಯಿಂಗಾಜೆ, ಶಂಕರಿ ಕೊಲ್ಲರಮೂಲೆ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಜೇನು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ದಯಾನಂದ ಪಾತಿಕಲ್ಲು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ವಿಜಯ ಕೊಲ್ಲರಮೂಲೆ, ಅಂಗನವಾಡಿ ಶಿಕ್ಷಕಿ ಶ್ರೀಮತಿ ರತ್ನಾವತಿ ವಾಲ್ತಾಜೆ, ಮುಖ್ಯ ಶಿಕ್ಷಕ ಚಿನ್ನ ಸ್ವಾಮಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೋಲ್ಚಾರು ಕುಟುಂಬದ ಮತ್ತು ಆಲೆಟ್ಟಿ ಪಂಚಾಯತ್ ವತಿಯಿಂದ ಶಾಲೆಗೆ ಸುಮಾರು 3.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲ್ಪಡುವ ನೂತನ ಪ್ರವೇಶ ದ್ವಾರದ ಗುದ್ದಲಿ ಪೂಜೆಯನ್ನು ಕೋಲ್ಚಾರು ಕುಟುಂಬದ ಹಿರಿಯರಾದ ರಾಮಪ್ಪ ಗೌಡ ಕೋಲ್ಚಾರು ರವರು
ದೀಪ ಪ್ರಜ್ವಲಿಸಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೋಲ್ಚಾರು ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಆಶಯಗೀತೆ ಪ್ರಸ್ತುತ ಪಡಿಸಿದರು. ಶಿಕ್ಷಕ ರಂಗನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕ ಚಿನ್ನ ಸ್ವಾಮಿ ಶೆಟ್ಟಿಸ್ವಾಗತಿಸಿದರು.
ಸಹ ಶಿಕ್ಷಕಿ ಮಮತಾ ಕುದ್ಕುಳಿವಂದಿಸಿದರು. ಸಹ ಶಿಕ್ಷಕಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಅದ್ಯಾಪಕ ವೃಂದದವರು ಮತ್ತು ಅಡುಗೆ ಸಿಬ್ಬಂದಿ ವರ್ಗದವರು ಸಹಕರಿಸಿದರು. ಊರಿನ ವಿದ್ಯಾಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.

ರಾಜ್ಯ ಪ್ರಶಸ್ತಿ ಲಭಿಸಿರುವುದು ಕೋಲ್ಚಾರಿಗೆ ಮಾತ್ರ ಸೀಮಿತವಾಗದೆ ಆಲೆಟ್ಟಿ ಗ್ರಾಮಕ್ಕೆ ಸಂದ ಗೌರವ ಎಂದು ಭಾವಿಸಿದ್ದೇನೆ.
ಗ್ರಾಮದ ಎಲ್ಲರೂ ಒಟ್ಟಾಗಿ ಸೇರಿಕೊಂಡು ಕೇಂದ್ರ ಭಾಗದಲ್ಲಿ ಈ ಸಂಭ್ರಮಾಚರಣೆ ಆಯೋಜಿಸಿದ್ದರೆ ಮೆರುಗು ಹೆಚ್ಚಾಗಿರುತ್ತಿತ್ತು- ವೀಣಾ ವಸಂತ

ಇವತ್ತು ಮದುವೆ ಕಳೆದು ಅರತಕ್ಷತೆ ಕಾರ್ಯಕ್ರಮದ ಸಂಭ್ರಮಾಚರಣೆ.
ಮುಖ್ಯ ಮಂತ್ರಿಯವರ ಸಮ್ಮುಖದಲ್ಲಿ ಅಧಿಕೃತ ನಡೆದ ಮದುವೆ ಇದಾಗಿದೆ. ಅಂದು ಇಲಾಖೆಯಿಂದ ಬಂದ ಸಂದರ್ಭದಲ್ಲಿ ಯಾಕೆ ಮಾಡಲಿಲ್ಲ ಪ್ರಶ್ನಿಸುತ್ತಿದ್ದೇವೆ. ಈಗ ಹೇಗೆ ಮಾಡಿದ್ದೀರಿ ಎಂದು ಕೇಳಬೇಕಾಗಿದೆ.
ಪ್ರಶಸ್ತಿಯ ಒಳ ಗುಟ್ಟು ಶಾಲೆಯಲ್ಲಿರುವ ಶತಕ ವಿದ್ಯಾರ್ಥಿಗಳ ಸಂಖ್ಯೆ. ಪ್ರಶಸ್ತಿಯ ದೊಡ್ಡ ಪಾಲು ಪೋಷಕರಿಗೆ ಸೇರಬೇಕು.
ಎಸ್.ಡಿ.ಎಂ.ಸಿ ಯವರು ಹಲವು ಸಮಸ್ಯೆಯನ್ನು ಪರಿಹರಿಸಿಕೊಂಡು ಸಾಧನೆ ಮಾಡಿದ್ದಾರೆ. ನಮ್ಮೂರ ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗೆ ಹೋಲಿಸಬಾರದು. ಸರಕಾರಿ ಶಾಲೆಗೆ ಹೋಲಿಕೆ ಮಾಡಿಕೊಳ್ಳಬೇಕು.
ನಮ್ಮ ಶಾಲೆಯನ್ನು
ಬಿಟ್ಟು ಕೊಡದ ಊರಿನ ವಿದ್ಯಾಭಿಮಾನಿಗಳ ಸಹಕಾರದಿಂದ ಪ್ರಶಸ್ತಿ ಲಭಿಸಿರುವುದು ಶ್ಲಾಘನೀಯ. ಮುಂದೆ ರಾಷ್ಟ್ರ ಪ್ರಶಸ್ತಿ ಬರುವಂತಾಗಲಿ- ಪ್ರಕಾಶ್ ಮೂಡಿತ್ತಾಯ

ಪ್ರಾಥಮಿಕ ವಿಭಾಗದ ತಾಲೂಕಿನ 196 ಶಾಲೆಯಲ್ಲಿ ಕೋಲ್ಚಾರು ಶಾಲೆಯ ವಿದ್ಯಾರ್ಥಿಗಳ ಚಟುವಟಿಕೆಗಳು ಅತ್ಯಂತ ಮೆಚ್ಚುಗೆ ಗಳಿಸಿಕೊಂಡಿದೆ.
ತಾಲೂಕಿನ ನಾಲ್ಕು ಶಾಲೆಗಳು ರೇಸ್ ನಲ್ಲಿತ್ತು ಅದರಲ್ಲಿಸಮುದಾಯದತ್ತ ಶಾಲೆ ಎಂಬ ವಿಷಯದಿಂದಾಗಿ ಕೋಲ್ಚಾರು ಶಾಲೆ ಆಯ್ಕೆಗೆ ಪಾತ್ರವಾಯಿತು.
ಜಿಲ್ಲೆಯಲ್ಲಿ ಪ್ರಶಸ್ತಿಗೆ ಬಹಳಷ್ಟು ಸ್ಪರ್ಧೆಯು ಏರ್ಪಡಿತ್ತು. ಸರಳವಾಗಿ ಸಹಜವಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇವೆ.
ಅರ್ಹವಾಗಿ ಪ್ರಶಸ್ತಿ ಕೋಲ್ಚಾರು ಶಾಲೆಗೆ ಬಂದಿರುವುದು ಅಭಿನಂದನೀಯ- ಶೀತಲ್ ಯು.ಕೆ

ರಾಜ್ಯದಲ್ಲಿ ಸಾವಿರಾರು ಶಾಲೆಯ ಪೈಕಿ ನಮ್ಮ ಜಿಲ್ಲೆಯ ಸುಳ್ಯದ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರು ಶಾಲೆಆಯ್ಕೆಯಾಗಿರುವುದು ಶ್ಲಾಘನೀಯ.
ಶಾಲೆಯ ಅಭಿವೃದ್ಧಿಗೆ ಬೇಕಾದ ಅನುದಾನದ ಕೊರತೆಯಿಂದಾಗಿ ತಾಲೂಕಿನ ಎಲ್ಲಾ ಶಾಲೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಊರಿನ ನಾಗರಿಕರ ಮತ್ತು ಶಿಕ್ಷಕರ ಸಹಭಾಗಿತ್ವದಲ್ಲಿ ಪ್ರಶಸ್ತಿ ಸಿಗಲು ಸಾಧ್ಯವಾಗಿದೆ‌.
ಈ ಶಾಲೆಯ ವಾತಾವರಣ ಸರಕಾರಿ ಶಾಲೆಯ ಹಾಗೆ ಕಾಣಿಸುತ್ತಿಲ್ಲ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಭಾಸವಾಗುತ್ತಿದೆ.
ಮುಂದೆ ಈ ಶಾಲೆಗೆ ದೇಶದ ಪ್ರಧಾನಿ ಮೋದಿಯವರಿಂದ ರಾಷ್ಟ್ರ
ಪ್ರಶಸ್ತಿ ಪಡೆದುಕೊಳ್ಳುವ ಸೌಭಾಗ್ಯ ದೊರಕುವಂತಾಗಲಿ -ಕು.ಭಾಗೀರಥಿ ಮುರುಳ್ಯ