ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಕೃತಿ ಬಿಡುಗಡೆ ಹಾಗೂ ಗಣೇಶೋತ್ಸವದ ಅಂಗವಾಗಿ ಪೂಜೆ, ಭಜನೆ

0

ಅಜ್ಜಾವರ ಗ್ರಾಮದ ದೇವರ ಕಳಿಯ ಚೈತನ್ಯ ಸೇವಾಶ್ರಮದಲ್ಲಿ ಆಶ್ರಮದ ಸ್ವಾಮೀಜಿ ಯೋಗೇಶ್ವರಾನಂದ ಸರಸ್ವತಿಯವರ 210ನೇ ಕ್ರತಿ ಕರ್ಮ ವೀರನಾಗು ಬಿಡುಗಡೆ,ಗಣೇಶ ಚತುರ್ಥಿ ಅಂಗವಾಗಿ ಗಣಪತಿ ಪೂಜೆ,ಭಜನಾ ಸತ್ಸಂಗ ಕಾರ್ಯಕ್ರಮ ಆಶ್ರಮದಲ್ಲಿ ನಡೆಯಿತು.


ನಿವ್ರತ್ತ ಶಿಕ್ಷಣ ಸಂಯೋಜಕ ಕೇಶವವರು ಕ್ರತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ
ಸ್ವಾಮೀಜಿಯವರು ಆಧ್ಯಾತ್ಮಿಕ್ಕೆ ಪೂರಕವಾದ ಸಣ್ಣ ಪುಸ್ತಕಗಳನ್ನು‌ ಬರೆದು ಉಚಿತವಾಗಿ ವಿತರಣೆ ಮಾಡುತ್ತಿರುವುದು ಒಂದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.


ಸ್ವಾಮೀಜಿಯವರು ಮಾತನಾಡಿ ನಾವು ದಶ್ಚಟಗಳಿಂದ ದೂರ ದೂರವಿರಬೇಕು.ಸಜ್ಜನರ ಸಹವಾಸ ಮಾಡಿ ದುರ್ಜನರ ಸಂಘದಿಂದ ದೂರವಿರಬೇಕು.ಉತ್ತಮ ಗುಣನಡೆತೆಗಳನ್ನು ರೂಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕೆಂದು ಹೇಳಿದರು.
ಸುಳ್ಯ ಉದ್ಯಾವನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಾಯಿ ಗೀತಾ ಮಾತನಾಡಿ ಭಜನಗೆ ಶ್ರೇಷ್ಠ ಶಕ್ತಿ ಇದೆ.ಭಗವಂತನ ನಾಮ ವಾತಾವರಣದಲ್ಲಿ ಪಸರಿಸಿದ್ದಾಗ ದುಷ್ಟಶಕ್ತಿಗಳು ದೂರವಾಗುತ್ತವೆ ಎಂದು ಹೇಳಿದರು.


ನಿವ್ರತ್ತ ಎ.ಎಸ್.ಐ ಕುಶಾಲಪ್ಪ ಗೌಡ ಮಾತನಾಡಿ, ಮಕ್ಕಳಲ್ಲಿ ಅಧುನಿಕ ಕಾಲಘಟ್ಟದಲ್ಲಿ ದೇವರ ಮೇಲೆ ಭಕ್ತಿ ಕಡಿಮೆಯಾಗಿದೆ.ದೇವರಲ್ಲಿ ಭಕ್ತಿ ಹೆಚ್ಚಿಸಿಕೊಂಡು ಆಧ್ಯಾತ್ಮಿಕ ಕಡೆ ಒಲವು ತೋರಿಸಬೇಕೆಂದು ಹೇಳಿದರು.


ಶಿಕ್ಷಕಿ ಸುನಂದನರವರು ಮಾತನಾಡಿ ನಿರಂತರವಾಗಿ ಪುಸ್ತಕ ಬರೆದು ಸಮಾಜಕ್ಕೆ ನೀಡುತ್ತಿರುವುದು ಶ್ರೇಷ್ಠ ಕೆಲಸ ಎಂದು ಹೇಳಿದರು.
ಆಶ್ರಮದ ಟ್ರಸ್ಟಿ ಪ್ರಣವಿ ಇತರರು ಉಪಸ್ಥಿತರಿದ್ದರು.


ಡಾ.ಸಾಯಿಗೀತಾ ತಂಡದವರಿಂದ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.ಗಣೇಶ ಚತುರ್ಥಿ ಅಂಗವಾಗಿ ಗಣಪತಿ ಪೂಜೆ ನಡೆಯಿತು.