ಕೇವಲ ಎರಡೇ ತಿಂಗಳಲ್ಲಿ ಗುಂಡಿಬಿದ್ದ ಕಲ್ಲೋನಿ ಕುಳ್ಳಂಪಾಡಿ ರಸ್ತೆ

0

ಕಳೆದ ಮೇ ತಿಂಗಳಲ್ಲಷ್ಟೇ ಕಾಮಗಾರಿ ನಡೆದ ಬೆಳ್ಳಾರೆಯ ಕುಳ್ಳಂಪಾಡಿ ಕಾಂಕ್ರೀಟ್ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಬಿದ್ದಿದ್ದು, ಕಾಮಗಾರಿ ಕಳಪೆಯಾಗಿರಬಹುದೆಂದು ಊರವರು ಆರೋಪಿಸಿದ್ದಾರೆ.

ಮುಖ್ಯ ಮಂತ್ರಿಗಳ ವಿಶೇಷ ಅನುದಾನದ ಮೂಲಕ ಸುಮಾರು 1 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆದಿತಿತ್ತು. ಇದೇ ರೀತಿ ರಸ್ತೆಯ ಇನ್ನೊಂದು ಭಾಗ ಕುಸಿಯುವ ಭೀತಿಯಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆಗೆ ಗಮನಹರಿಸುವಂತೆ ಫಲಾನುಭವಿಗಳು ಸುದ್ದಿಗೆ ತಿಳಿಸಿದ್ದಾರೆ.