ಪರಿಸರ ಪ್ರೇಮಿ ಡಾ| ಆರ್. ಕೆ ನಾಯರ್ ಕೋಲ್ಚಾರು ಶಾಲೆಗೆ ಭೇಟಿ

0

ಶಾಲೆಗೆ ಒಂದು ಲಕ್ಷ ಸಹಾಯಧನ ಘೋಷಣೆ

ಗುಜರಾತಿನಲ್ಲಿ ಉದ್ಯಮಿಯಾಗಿದ್ದು, ದೇಶಾದ್ಯಂತ ಲಕ್ಷಾಂತರ ಗಿಡಗಳನ್ನು ನೆಟ್ಟು ಮರುಭೂಮಿಯಲ್ಲೂ ಅರಣ್ಯ ಬೆಳೆಸಿದ ಕಾಡಿನ ಸೃಷ್ಟಿಕರ್ತ ಡಾ| ಆರ್.ಕೆ.ನಾಯರ್ ರವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರುಗೆ ಜು. 20 ರಂದು ಭೇಟಿ ನೀಡಿದರು.

ಮಕ್ಕಳೊಂದಿಗೆ ಬೆರೆತು ಪರಿಸರದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ ನಂತರ ಶಾಲೆಯ ಸುತ್ತಲಿನ ಪರಿಸರವನ್ನು ಮೆಚ್ಚಿಕೊಂಡು, ಶಾಲಾ ಕೊಠಡಿಗಳ ಸ್ವಚ್ಛತೆ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಸಭಾಭವನ ಶಾಲಾ ಸಭಾಭವನ ವೀಕ್ಷಿಸಿ, ಶಿಕ್ಷಕರ, ಎಸ್ ಡಿ ಎಂ ಸಿ,ಮತ್ತು ಪೋಷಕರ ಇಚ್ಚಾಶಕ್ತಿ ಗಮನಿಸಿ ಸಭಾಭವನದ ಕೆಲಸಕ್ಕೆ ರೂ. 1 ಲಕ್ಷ ಸಹಾಯಧನ ನೀಡುವುದಾಗಿ ಘೋಷಿಸಿದರು.

ಬಿಸಿಯೂಟ ಸವಿದು ಶಾಲೆಗೆ ಭೇಟಿ ನೀಡಿದ ಸವಿನೆನಪಿಗಾಗಿ ತೆಂಗಿನ ಗಿಡವನ್ನು ನೆಟ್ಟರು.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಹೇಮಾವತಿ ಕೊಯಿoಗಾಜೆ, ಸದಸ್ಯರಾದ ಕರುಣಾಕರ ಹಾಸ್ಪರೆ, ಜಗದೀಶ ಕೂಳಿಯಡ್ಕ, ಲಲಿತ ಕದಿಕಡ್ಕ, ಹೇಮಾವತಿ ಕದಿಕಡ್ಕ, ವಸಂತಿ ಕುಡೆoಬಿ, ಪೋಷಕರಾದ ಶಿವಪ್ರಸಾದ್ ಕೊಲ್ಚಾರ್, ಪ್ರೇಮ ಹೊಸಗದ್ದೆ, ಶಿಕ್ಷಕರಾದ ಮಮತಾ ಕೆ.ವಿ, ವಿನುತಾ ಕೋಲ್ಚಾರು, ಸಹನಾ ಕೊಯಿಂಗಾಜೆ, ಅಡುಗೆ ಸಿಬ್ಬಂದಿ ಶೀಲಾವತಿ ಕೊನ್ನೊಡಿ,ಲೋಕೇಶ್ವರಿ ಕೋಲ್ಚಾರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಜಲಜಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ರಂಗನಾಥ ಎಂ.ಎಸ್ ವಂದಿಸಿದರು.