ಬಾಳಿಲ : ಸಂಸ್ಥಾಪಕರ ಸಂಸ್ಮರಣೆ ಮತ್ತು ಸಾಹಿತ್ಯೋತ್ಸವ

0

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಸ್ವರ್ಗೀಯ ನೆಟ್ಟಾರು ವೆಂಕಟಸುಬ್ಬರಾವ್ ರವರ ಸಂಸ್ಮರಣೆ ಹಾಗೂ ಅವರ ಸ್ಮರಣಾರ್ಥ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲೆ ಹಾಗೂ ವಲಯ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ಒಳಗೊಂಡ ಸಾಹಿತ್ಯೋತ್ಸವವು ಪ್ರೌಢಶಾಲಾ ಸಭಾಂಗಣದಲ್ಲಿ ಜು. 18ರಂದು ಜರುಗಿತು.


ಡಾ. ಶ್ಯಾಮ್ ಭಟ್ ಕೆರೆಕೋಡಿ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ, ಪೂಜ್ಯರೊಂದಿಗಿದ್ದ ಒಡನಾಟ, ಅವರ ಶೈಕ್ಷಣಿಕ ಕಾಳಜಿಯನ್ನು ಸ್ಮರಿಸಿ, ನುಡಿ ನಮನ ಅರ್ಪಿಸಿ, ಸಾಹಿತ್ಯೋತ್ಸವದ ಸ್ಪರ್ಧೆಗಳಿಗೆ ಶುಭ ಹಾರೈಸಿದರು.


ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಎನ್ ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಪಿಜಿಎಸ್ಎನ್ ಪ್ರಸಾದ್, ಕೋಶಾಧಿಕಾರಿ ರಾಧಾಕೃಷ್ಣರಾವ್ ಯು ಭಾಗವಹಿಸಿ ಪೂಜ್ಯರ ಸಂಸ್ಮರಣೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಡಳಿತ ಮಂಡಳಿಯ ಜೊತೆಕಾರ್ಯದರ್ಶಿ ಭಾರತೀ ಶಂಕರ ಆದಾಳ, ತಾಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು.


ನೆಟ್ಟಾರು ವೆಂಕಟಸುಬ್ಬರಾವ್ ಸ್ಮಾರಕ ಸ್ಪರ್ಧೆಗಳಾಗಿ ಪ್ರೌಢಶಾಲಾ ವಿಭಾಗಕ್ಕೆ ಭಾವಗೀತೆ, ಆಶುಭಾಷಣ ಹಾಗೂ ರಸಪ್ರಶ್ನೆ (ಲಿಖಿತ ಸುತ್ತು ಮತ್ತು ಮೌಖಿಕ ಸುತ್ತು),
ಹಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ಹಾಡು ಮತ್ತು ವರ್ಣ ಚಿತ್ರ
ಕಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ಹಾಡು
ಆಯೋಜಿಸಲಾಗಿತ್ತು.
ಈ ಸ್ಪರ್ಧೆಗಳ ನಿರ್ಣಾಯಕರಾಗಿ ರಂಗಸುರಭಿ ಕಲ್ಮಡ್ಕ ಇದರ ಸಂಚಾಲಕರಾದ ಮಹಾಬಲ ಕಲ್ಮಡ್ಕ, ಕಾಣಿಯೂರು ಕಣ್ವಶ್ರೀ ಸಾಂಸ್ಕೃತಿಕ ಕಲಾಕೇಂದ್ರದ ಸಂಚಾಲಕರಾದ ಸದಾನಂದ ಆಚಾರ್ಯ ಹಾಗೂ ಶಾಸ್ತ್ರೀಯ ಸಂಗೀತಕ್ಷೇತ್ರದಲ್ಲಿ ಕಲಾಸೇವೆಗೈಯುವ ಪುರೋಹಿತ್ ಸಚಿನ್ ಶರ್ಮಾ ನಿಂತಿಕಲ್ಲು ಸಹಕರಿಸಿದರು.
ಸುಳ್ಯ ತಾಲೂಕಿನ 21 ಪ್ರೌಢಶಾಲೆಗಳಿಂದ 129 ವಿದ್ಯಾರ್ಥಿಗಳು ಹಾಗೂ ವಲಯದ 11 ಹಿರಿಯ ಪ್ರಾಥಮಿಕ ಶಾಲೆಗಳಿಂದ 49 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಯಶೋಧರ ಎನ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳೊಂದಿಗೆ ಪೂಜ್ಯರ ಸಂಸ್ಮರಣೆ ಮಾಡಿದರು. ಸಹಶಿಕ್ಷಕಿ ಸಹನಾ ಬಿಬಿ ವಂದಿಸಿದ ಈ ಕಾರ್ಯಕ್ರಮವನ್ನು ಸಹಶಿಕ್ಷಕ ಉದಯಕುಮಾರ್ ರೈ ಎಸ್ ನಿರೂಪಿಸಿದರು.
ಸಂಸ್ಥೆಯ ಆಡಳಿತ ಮಂಡಳಿ, ಎಸ್ ಡಿ ಎಂ ಸಿ, ರಕ್ಷಕ ಶಿಕ್ಷಕ ಸಮಿತಿ, ಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಸಹಕರಿಸಿದರು.

ಸ್ಪರ್ಧೆಗಳ ಫಲಿತಾಂಶ

ಕಿರಿಯ ಪ್ರಾಥಮಿಕ ಶಾಲಾ ವಿಭಾಗ : ಹಾಡು
ಪ್ರಥಮ : ಅದ್ವಿತ್ ಬಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ
ದ್ವಿತೀಯ: ಸಮೃತ್ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ
ಪ್ರಾಪ್ತಿ ಎನ್ ಎಸ್, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಹಾಡು
ಪ್ರಥಮ: ತೃಷಾ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಅಲೆಕ್ಕಾಡಿ,
ರಕ್ಷಾ ಆರ್ ಕೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕ
ದ್ವಿತೀಯ: ಹಿತಾಶ್ರೀ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಅಲೆಕ್ಕಾಡಿ
ಸೃಜನ್ ಕೆ, ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ

ವರ್ಣ ಚಿತ್ರ:
ಪ್ರಥಮ: ಸಾನ್ವಿ ಎನ್ ಎಸ್, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ
ಅನ್ವಿತಾ ಸಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥ ಪಂಜ
ದ್ವಿತೀಯ: ವಿದ್ಯಾ ಕೆ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ

ಪ್ರೌಢಶಾಲಾ ವಿಭಾಗ
ಭಾವಗೀತೆ:
ಪ್ರಥಮ: ಆದ್ಯಾ ಬಾಬ್ಲುಬೆಟ್ಟು, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ
ದ್ವಿತೀಯ: ಹಂಶಿತಾ ಪಿ ಎನ್, ಸರ್ಕಾರಿ ಪ್ರೌಢಶಾಲೆ ಎಲಿಮಲೆ
ತನ್ವಿ ಎ, ಕೆಪಿಎಸ್ ಬೆಳ್ಳಾರೆ
ಶ್ರಾವ್ಯ, ಸರಕಾರಿ ಪ್ರೌಢಶಾಲೆ ಅಜ್ಜಾವರ

ಆಶುಭಾಷಣ:
ಪ್ರಥಮ: ಡಯಾನ ವೈ ಶೆಟ್ಟಿ, ಕೆಪಿಎಸ್ ಬೆಳ್ಳಾರೆ
ದ್ವಿತೀಯ: ಪ್ರಣಮ್ಯ ಎನ್ ಆಳ್ವ, ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ
ಸಿಂಚನಾ, ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ

ರಸಪ್ರಶ್ನೆ:
ಪ್ರಥಮ: ಶಿವಕೃಷ್ಣ ಎನ್ ಮತ್ತು ಪ್ರದೀಪ್ ಕೆ, ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ
ದ್ವಿತೀಯ: ರಚನ್ ಬಿ ಎ ಮತ್ತು ದರ್ಶನ್ ಎಚ್, ಸರಕಾರಿ ಪ್ರೌಢಶಾಲೆ ಮರ್ಕಂಜ

ಸಮಗ್ರ ಪ್ರಶಸ್ತಿ: ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ