ಸಂಪಾಜೆ ಗ್ರಾಮದ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಅನುದಾನ ದೊರಕಿಸಿ ಕೊಡುವಂತೆ ಹಾಗೂ ಪ್ಲಾಟಿಂಗ್ ಸಮಸ್ಯೆಯನ್ನು ಸರಿ ಪಡಿಸುವಂತೆ ಕೋರಿ, ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ವತಿಯಿಂದ ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.















ಸಮಿತಿ ಗೌರವಾಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ, ಅಧ್ಯಕ್ಷರಾದ ಕೆ.ಪಿ.ಜಾನಿ, ಸದಸ್ಯರುಗಳಾದ ಮಹಮ್ಮದ್ ಕುಂಞ ಗೂನಡ್ಕ, ಎ.ಕೆ.ಇಬ್ರಾಹಿಂ ಅವರು ಹರಿಶ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.









