ಭಾರೀ ಮಳೆ: ಸುಬ್ರಹ್ಮಣ್ಯ ದ ಕುಮಾರಧಾರಾ ಸ್ನಾನಘಟ್ಟ ಬಳಿ ಅಂಗಡಿ ಮುಳುಗಡೆಯ ಭೀತಿ

0

ಸುಬ್ರಹ್ಮಣ್ಯ ಪಂಜ ಮಂಜೇಶ್ವರ ರಸ್ತೆ ಬ್ಲಾಕ್ ಮುಂದುವರಿಕೆ

ಸುಬ್ರಹ್ಮಣ್ಯ ಪರಿಸರ ಸೇರಿದಂತೆ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಧಾರಾ ಸ್ನಾನಘಟ್ಟ ಇಂದು ಸಂಪೂರ್ಣ ಮುಳುಗಡೆಯಾಗಿದ್ದು ಸಂಜೆ ವೇಳೆ ನೀರಿನ ಹರಿವು ಹೆಚ್ಚಾಗಿದ್ದು ಅಂಗಡಿ ಮುಳುಗಡೆ ಭೀತಿ ಬಂದಿದೆ.

ಸುಬ್ರಹ್ಮಣ್ಯ ಪಂಜ ಮಂಜೇಶ್ವರ ರಸ್ತೆಯ ಮೇಲೆಯೂ ನೀರು ಬೆಳಗ್ಗೆಯೇ ಬಂದಿದ್ದು ಸಂಜೆಗಾಗುವಾಗ ನೀರಿನ ಹರಿವು ಹೆಚ್ಚಾಗಿದೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.