ಬೆಳ್ಳಾರೆ : ಜೇಸಿ ಮಿಥುನ್ ಶೆಣೈಯವರ ಮನೆಯಲ್ಲಿ ಜೇಸಿ ಕುಟುಂಬ ಮಿಲನ, ಆಟಿಡ್ ಒಂಜಿ ದಿನ ಕಾರ್ಯಕ್ರಮ

0

ಜೆಸಿಐ ಬೆಳ್ಳಾರೆ ವತಿಯಿಂದ ಜೆ.ಸಿ ಮಿಥುನ್ ಶೆಣೈ ಮನೆ ಅಂಗಳದಲ್ಲಿ ಜೆ.ಸಿ ರವೀಂದ್ರನಾಥ ಶೆಟ್ಟಿಯವರ ಸಬಾಧ್ಯಕ್ಷತೆಯಲ್ಲಿ ಜೆಸಿ ಕುಟುಂಬ ಮಿಲನ ಮತ್ತು ಆಟಿಟ್ ಒಂಜಿ ದಿನ ಕಾರ್ಯಕ್ರಮ ಆ.06 ರಂದು ನಡೆಯಿತು.


ಮುಖ್ಯ ಅತಿಥಿಯಾಗಿ ಜೆಸಿಯ ವಲಯ 15 ರ ಕಾರ್ಯಕ್ರಮ ನಿರ್ದೇಶಕಿ ಜೆಸಿ ಅಕ್ಷತ ಗಿರೀಶ್ ವಲಯ ಉಪಾಧ್ಯಕ್ಷ ಜೆಸಿ ದೇವಿಪ್ರಸಾದ್ ಕುದ್ಪಾಜೆ ವಲಯ ನಿರ್ದೇಶಕಿ ಜೆಸಿ ನಿರ್ಮಲಜಯರಾಮ ಮತ್ತು ಮನೆಯ ಚೈತ್ರಚಂದ್ರಶೇಖರ ಶೆಣೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೆಸಿಐ ಬೆಳ್ಳಾರೆಯ ಪೂರ್ವಧ್ಯಕ್ಷರು ಜೆಸಿ ಸದಸ್ಯರು ಸೇರಿ 2024 ನೇ ಅಧ್ಯಕ್ಷರನ್ನಾಗಿ ಜೆಸಿ ಜಗದೀಶ್ ರೈ ಪೆರುವಾಜೆ ಆಯ್ಕೆ ಮಾಡಲಾಯಿತು.


ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮ ನಿರ್ದೇಶಕರಾಗಿ ಜೆಸಿ ಮಿಥುನ್ ಶೆಣೈ ಮತ್ತು ಜೆಸಿ ಪ್ರೀತಮ್ ರೈ ನೆರವೇರಿಸಿದರು.