ಬೆಳ್ತಂಗಡಿ ಸೌಜನ್ಯಹತ್ಯೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂಬ ಕೂಗು ಸುಳ್ಯದಲ್ಲಿಯೂ ಕೇಳಿಬಂದಿದ್ದು ಇಂದು ಬೃಹತ್ ವಾಹನ ಜಾಥಾ ಹಾಗೂ ಬೃಹತ್ ಸಭೆ ನಡೆಯಲಿದೆ.
ಈಗಾಗಲೇ ನಿಂತಿಕಲ್ಲಿನಿಂದ ವಾಹನ ಜಾಥಾಕ್ಕೆ ಚಾಲನೆ ದೊರೆತಿದೆ.
ಇದರ ಅಂಗವಾಗಿ ಸುಳ್ಯದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಿಂತಿಕಲ್ಲಿನಿಂದ ಹೊರಟ ವಾಹಬ ಜಾಥಾ ಪೈಚಾರಿಗೆ ತಲುಪಿ ಅಲ್ಲಿಂದ ನಡಿಗೆಯ ಮೂಲಕ ಸುಳ್ಯಕ್ಕೆ ಬರಲಿದ್ದು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಬಂದೋಬಸ್ತ್ ಏರ್ಪಡಿಸಿದೆ. ಸುಳ್ಯದ ಜ್ಯೋತಿವೃತ್ತ ಪ್ರತಿಭಟನಾ ಸಭೆ ನಡೆಯಲಿರುವ ಖಾಸಗಿ ಬಸ್ಸು ನಿಲ್ದಾಣದಲ್ಲಿ ಪೊಲೀಸರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ.
ಅಡಿಷನಲ್ ಎಸ್ಪಿ ಧರ್ಮಪ್ಪರವರು ಸುಳ್ಯದಲ್ಲಿದ್ದು ಸಂಪೂರ್ಣ ನಿಗಾ ವಹಿಸಿದ್ದಾರೆ.
ಎರಡು ಕೆಎಸ್ಆರ್ಪಿ ತುಕಡಿ ಸಿಬ್ಬಂದಿಗಳು ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಪುತ್ತೂರು ವಿಭಾಗದ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಚಡಿಸುತ್ತಿದೆ.