ಪ್ರತಿಭಟನೆ ಷೋಷಣೆ ಮತ್ತು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಹಿನ್ನಲೆ

0


ಸಂಪಾಜೆ ಪಂಚಾಯತ್ ಬಳಿ ಬಿಗು ಪೊಲೀಸ್ ಬಂದೋಬಸ್ತ್


ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಇಂದು ನಡೆಯಲಿದ್ದು, ಈ ಮಧ್ಯೆ ಸಂಪಾಜೆ ನಾಗರಿಕ ಹಿತರಕ್ಷಣಾ ವೇದಿಕೆ ಪ್ರತಿಭಟನೆಯ ಘೋಷಣೆಯನ್ನೂ ಮಾಡಿರುವುದರಿಂದ ಸಂಪಾಜೆ ಗ್ರಾ.ಪಂ. ಎದುರು ಬಿಗು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.


ಸಂಪಾಜೆಯ ಇಬ್ರಾಹಿಂ ಮಾಸ್ಟರ್ ರವರು ತಮ್ಮ ಮಗಳ ಹೆಸರಿಗೆ ದಾನಪತ್ರ ನೀಡಿದ ಜಾಗದ ಖಾತಾ ಬದಲಾವಣೆಗೆ ಅರ್ಜಿ ನೀಡಿದ ಬಳಿಕ ಅಗತ್ಯವಿರುವ ಎಲ್ಲಾ ದಾಖಲೆ ಪತ್ರ ನೀಡಿದ್ದರೂ ವಿಳಂಬ ಧೋರಣೆ ಮಾಡುತ್ತಿರುವುದಲ್ಲದೆ, ಇಬ್ರಾಹಿಂ ಮಾಸ್ಟರ್ ರವರು ಕ್ಷಮೆ ಕೇಳದೆ ಅವರ ಕಡತ ವಿಲೇ ಮಾಡುವುದಿಲ್ಲವೆಂದು ಹೇಳುವುದರ ಮೂಲಕ ಪಿ.ಡಿ.ಒ. ಸರಿತಾ ಓಲ್ಗಾ ಡಿಸೋಜರವರು ಪ್ರಜಾಪ್ರಭುತ್ವ ವಿರೋದಿ ಧೋರಣೆ ತೋರುತ್ತಿದ್ದಾರೆಂದು ಆರೋಪಿಸಿ ಇಂದು ಪಂಚಾಯತ್ ಎದುರು ಹಕ್ಕೊತ್ತಾಯ ಧರಣಿ ನಡೆಸಲು ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ನಿರ್ಧರಿಸಿತ್ತು.

ಈ ಮಾಹಿತಿ ಪಡೆದ ಪೊಲೀಸ್ ಇಲಾಖೆ ಸಮಿತಿ ಮುಖಂಡರನ್ನು ಸಂಪರ್ಕಿಸಿ ಠಾಣೆಯಲ್ಲಿ ಮಾತುಕತೆ ನಡೆಸಲು ಬರುವಂತೆ ತಿಳಿಸಿದ್ದರು. ಈ ಮಧ್ಯೆ ಇಂದು ಸಂಪಾಜೆ ಗ್ರಾ.ಪಂ., ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯೂ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಸಂಪಾಜೆಯಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಮಿತಿಯ ಮುಖಂಡರು ಸ್ಥಳದಲ್ಲಿದ್ದು, ಪೊಲೀಸ್ ಅಧಿಕಾರಿಗಳ ಆಗಮನಕ್ಕೆ ಕಾಯುತ್ತಿದ್ದಾರೆ.