ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬೇಬಿ ಕಲ್ತಡ್ಕ

0

ಉಪಾಧ್ಯಕ್ಷರಾಗಿ ಜಯರಾಮ ಅತ್ಯಡ್ಕ ಅವಿರೋಧ ಆಯ್ಕೆ

ಅಜ್ಜಾವರ ಗ್ರಾಮ ಪಂಚಾಯತ್ ನ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬೇಬಿ ಕಲ್ತಡ್ಕ – ಅಡ್ಪಂಗಾಯ ಹಾಗೂ ಉಪಾಧ್ಯಕ್ಷರಾಗಿ ಜಯರಾಮ ಅತ್ಯಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆ.9 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ಅಧ್ಯಕ್ಷತೆಗೆ ಬೇಬಿ‌ ಕಲ್ತಡ್ಕರನ್ನು ಸದಸ್ಯೆ ದೇವಕಿ ಕಾಟಿಪಳ್ಳ ಸೂಚಿಸಿದರು. ಉಪಾಧ್ಯಕ್ಷತೆಗೆ ಜಯರಾಮ ಅತ್ಯಡ್ಕ ರನ್ನು‌ ಸದಸ್ಯ ಅಬ್ದುಲ್ಲ ಅಜ್ಜಾವರ ಸೂಚಿಸಿದರು.

ಮಧ್ಯಾಹ್ನ 1 ಗಂಟೆಗೆ ಚುನಾವಣಾಧಿಕಾರಿಯಾಗಿದ್ದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಡಾ.ಸುಂದರ ಕೇನಾಜೆ ಚುನಾವಣಾ ಪ್ರಕ್ರಿಯೆ ನಡೆಸಿ, ಅಧ್ಯಕ್ಷ – ಉಪಾಧ್ಯಕ್ಷರು ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು. ಪಿಡಿಒ ಜಯಮಾಲ ಎ.ಕೆ. ಸಹಾಯಕರಾಗಿದ್ದರು.

ಪಂಚಾಯತ್ ಉಪಾಧ್ಯಕ್ಷೆ ಲೀಲಾ ಮನಮೋಹನ, ಪಂಚಾಯತ್ ಸದಸ್ಯರುಗಳಾದ ಪ್ರಸಾದ್ ರೈ ಮೇನಾಲ, ರಾಹುಲ್ ಅಡ್ಪಂಗಾಯ, ರಾಘವ ಮುಳ್ಯ, ಶಿವಕುಮಾರ್ ಮುಳ್ಯ, ಅಬ್ದುಲ್ಲ ಅಜ್ಜಾವರ, ಶ್ವೇತಾ ಶಿರಾಜೆ, ದೇವಕಿ ಕಾಟಿಪಳ್ಳ, ವಿಶ್ವನಾಥ, ಗೀತಾ ಕಲ್ಲಗುಡ್ಡೆ ಉಪಸ್ಥಿತರಿದ್ದರು.

ಬಿಜೆಪಿ ಬೆಂಬಲಿತರಾಗಿರುವ ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ ಬಸವನಪಾದೆ ಸಹಿತ ಎಲ್ಲ ಐದು ಮಂದಿ ಸದಸ್ಯರು‌ ಗೈರಾಗಿದ್ದರು.