ದ.ಕ. ಸಂಪಾಜೆ ಗ್ರಾ.ಪಂ. ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವಿರೋಧ ಆಯ್ಕೆ

0

ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಲಿದೆ ಚುನಾವಣೆ

ದ.ಕ. ಸಂಪಾಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಕಣದಲ್ಲಿದ್ದು ಚುನಾವಣೆ ನಡೆಯಲಿದೆ. ಮುಂದಿನ ಎರಡೂವರೆ ವರ್ಷದ ಎರಡನೇ ಅವಧಿಯ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರಿಗೆ ಬಹುಮತ ಇರುವ ಪಂಚಾಯತ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಮತಿ ಶಕ್ತಿವೇಲು ಹಾಗೂ ವಿಮಲಾ ಪ್ರಸಾದ್ ನಾಮಪತ್ರ ಸಲ್ಲಿಸಿದ್ದರು. ವಿಮಲ ಪ್ರಸಾದ್ ನಾಮಪತ್ರ ಹಿಂಪಡೆದರು. ಈ ಹಿನ್ನಲೆಯಲ್ಲಿ ಸುಮತಿ ಶಕ್ತಿವೇಲು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಪಿ.ಕೆ.ಅಬೂಸಾಲಿ ಹಾಗೂ ಎಸ್.ಕೆ.ಹನೀಫ ಅವರು ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಹಿಂಪಡೆಯದ ಕಾರಣ ಚುನಾವಣೆ ನಡೆಯಲಿದೆ.