ದ.ಕ. ಸಂಪಾಜೆ ಗ್ರಾಮ ಪಂಚಾಯತ್ 2 ನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

0


ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾಗಿ ಹನೀಫ್ ಎಸ್.ಕೆ.


ದ.ಕ. ಸಂಪಾಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಎಸ್.ಕೆ.ಮಹಮ್ಮದ್ ಹನೀಫ್ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ.
ಕಳೆದ ವರ್ಷ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷತೆ ಅಧಿಕಾರ ಹಂಚಿಕೆಯಲ್ಲಿ ಗೊಂದಲವಾದರೂ ಈ ಬಾರಿ ರಾಜಕೀಯ ಬೆಳವಣಿಗೆಗೆ ಚರ್ಚೆ ಆಗಿದ್ದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಗಿ ಸುಮತಿ ಶಕ್ತಿವೇಲು ಅವಿರೋಧವಾಗಿ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ಅಬುಸಾಲಿ ಹಾಗೂ ಎಸ್.ಕೆ.ಮಹಮ್ಮದ್ ಹನೀಫ್‌ರವರು ಸ್ಪರ್ಧಿಸಿದ್ದು, ಉಪಾಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಎಸ್.ಕೆ.ಮಹಮ್ಮದ್ ಹನೀಫ್‌ರವರು ೯ ಮತ ಪಡೆದು ಆಯ್ಕೆಯಾದರು. ೫ ಮತ ಪಡೆದ ಅಬುಸಾಲಿಯವರು ಪರಾಭವಗೊಂಡರು.