ಮಡಪ್ಪಾಡಿ- ಕಂದ್ರಪ್ಪಾಡಿ ರಸ್ತೆಯ ಅವ್ಯವಸ್ಥೆ

0

ಮಡಪ್ಪಾಡಿ ಕಂದ್ರಪ್ಪಾಡಿ ಗುತ್ತಿಗಾರು ರಸ್ತೆಯ ದೇವಚಳ್ಳ ಗ್ರಾಮ ಪಂಚಾಯತು ವ್ಯಾಪ್ತಿಯ ದೇವ ಗುರುಪುರ ಎಂಬಲ್ಲಿ ರಸ್ತೆಯು ತೀರ ಹದಗೆಟ್ಟು ಕೆಸರುಮಯವಾಗಿ ದ್ವಿಚಕ್ರ ವಾಹನ ಸಂಚರಿಸಲು‌ ಹರಸಾಹಸ ಪಡುವಂತಾಗಿದೆ‌ ಹಾಗೂ ನಡೆದು ಕೊಂಡು ಹೋಗಲು ತುಂಬಾ ತೊಂದರೆ ಆಗಿದೆ. ಇಲ್ಲಿಗೆ ಕೆಲ ಸಮಯದ ಹಿಂದೆ ಈ ರಸ್ತೆಯನ್ನು ಮಣ್ಣು ಹಾಕು ಎತ್ತರಿಸಲಾಗಿದೆ. ಇದೇ ಜಾಗ ಈಗ ಜಾರು ಬಂಡಿಯಾಗಿದೆ‌.