ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ

0

ಉಪಾಧ್ಯಕ್ಷರಾಗಿ ನಾರಾಯಣ ಕೃಷ್ಣನಗರ ಅವಿರೋಧ ಆಯ್ಕೆ

ಪಂಜ ಗ್ರಾಮ ಪಂಚಾಯತ್ ಮುಂದಿನ ಎರಡೂವರೆ ವರ್ಷದ ಅವಧಿಗೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ(ಕಲ್ಕ) ಹಾಗೂ ಉಪಾಧ್ಯಕ್ಷರಾಗಿ ನಾರಾಯಣ ಕೃಷ್ಣನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಂಜಾನೆ ಚುನಾವಣೆ ಪ್ರಕ್ರಿಯೆ ನಡೆದು ಎರಡು ಸ್ಥಾನಗಳಿಗೂ ತಲಾ ಒಬ್ಬರು ನಾಮ ಪತ್ರ ಸಲ್ಲಿಕೆ ಮಾಡಿದ್ದು , ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಕಲ್ಕ ರವರಿಗೆ ಶರತ್ ಕುದ್ವ ಸೂಚಕರಾಗಿದ್ದರು. ನಾರಾಯಣ ಕೃಷ್ಣನಗರ ರವರಿಗೆ ಚಂದ್ರಶೇಖರ ದೇರಾಜೆ ಸೂಚಕರಾಗಿದ್ದರು. ಎರಡು ಸ್ಥಾನಗಳಿಗೆ ತಲ ಒಂದ ಒಂದೇ ನಾಮ ಪತ್ರ ಸಲ್ಲಿಕೆಯಾದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಚುನಾವಣೆ ಅಧಿಕಾರಿಯಾಗಿ (ಸುಳ್ಯ ವಲಯ ಅರಣ್ಯಾಧಿಕಾರಿ)ಮಂಜುನಾಥ ರವರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಲಕ್ಷ್ಮಣ ಗೌಡ ಬೊಳ್ಳಾಜೆ, ಜಗದೀಶ್ ಪುರಿಯ,ಶ್ರೀಮತಿ ವೀಣಾ ಪಂಜ, ಶರತ್ ಕುದ್ವ ಪ್ರಮೀಳಾ ಸಂಪ, ಶ್ರೀಮತಿ ದಿವ್ಯಾ ಪುಂಡಿಮನೆ, ಶ್ರೀಮತಿ ಮಲ್ಲಿಕಾ,ಲಿಖಿತ್ ಪಲ್ಲೋಡಿ, ಚಂದ್ರಶೇಖರ ದೇರಾಜೆ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ರೈ, ಪೂರ್ವಾಧ್ಯಕ್ಷರಾದ ಕಾರ್ಯಪ್ಪ ಗೌಡ ಚಿದ್ಗಲ್ಲು,ಲಿಗೋಧರ ಆಚಾರ್ಯ, ಮಾಜಿ ಸದಸ್ಯರಾದ ಲೋಕೇಶ್ ಬರೆಮೇಲು, ಶ್ರೀಮತಿ ನಿರ್ಮಲಾ ಪಲ್ಲೋಡಿ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ, ನಿರ್ದೇಶಕ ಚಿನ್ನಪ್ಪ ಗೌಡ ಚೊಟ್ಟೆಮಜಲು, ಶಿವರಾಮಯ್ಯ ಕರ್ಮಾಜೆ, ತಿಮ್ಮಪ್ಪ ಗೌಡ ಕೂತ್ಕುಂಜ, ಧರ್ಮಪಾಲ ಕಕ್ಯಾನ,ಚಂದ್ರಶೇಖರ ಮೇಲ್ಪಾಡಿ, ಚೆನ್ನಕೇಶವ ಆಚಾರ್ಯ,ಶ್ರೀಮತಿ ಸುಶೀಲಾ, ಶ್ರೀಮತಿ ಶ್ಯಾಮಲ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೋಪಾಲಕೃಷ್ಣ, ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.ಚುನಾವಣಾಧಿಕಾರಿ ಮಂಜುನಾಥ,ಲಕ್ಷ್ಮಣ ಗೌಡ ಬೊಳ್ಳಾಜೆ, ಶರತ್ ಕುದ್ವ,ಕಾರ್ಯಪ್ಪ ಗೌಡ ಚಿದ್ಗಲ್ಲು, ಚಂದ್ರಶೇಖರ ಶಾಸ್ತ್ರಿ, ಶ್ರೀಮತಿ ಪೂರ್ಣಿಮಾ ದೇರಾಜೆ, ಶ್ರೀಮತಿ ನೇತ್ರಾವತಿ ಕಲ್ಲಾಜೆ ಶುಭ ಹಾರೈಸಿದರು. ನೂತನ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ (ಕಲ್ಕ), ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ಕೃತಜ್ಞತೆ ಪೂರ್ವಕ ಮಾತನಾಡಿದರು

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ರೈ ಸ್ವಾಗತಿಸಿ, ವಂದಿಸಿದರು.
: .