2022 ಜು.19 ರಂದು ಕಳಂಜದಲ್ಲಿ ಮಸೂದ್ ಎಂಬ ಯುವಕನ ಕೊಲೆಗೆ ಕಾರಣರಾದ ಆರೋಪದ ಮೇರೆಗೆ ಬಂಧಿತರಾಗಿ ಜೈಲಿನಲ್ಲಿರುವವರಲ್ಲಿ ನಾಲ್ಕನೇ ಆರೋಪಿ ಶಿವಪ್ರಸಾದ್ ಕಳಂಜ ಎಂಬವರಿಗೆ ಜಾಮೀನು ದೊರೆತಿದೆ ಎಂದು ತಿಳಿದುಬಂದಿದೆ.















ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿ ಆರೋಪಿಗಳು ಜೈಲಿನಲ್ಲಿದ್ದರು. ಅವರಲ್ಲಿ ಭಾಸ್ಕರ್ ಹಾಗೂ ರಂಜಿತ್ ಎಂಬವರಿಗೆ ಕೆಲದಿನಗಳ ಹಿಂದೆ ಹೈಕೋರ್ಟ್ ಜಾಮೀನು ನೀಡಿತ್ತು. ಇಂದು ನಾಲ್ಕನೇ ಆರೋಪಿ ಶಿವಪ್ರಸಾದ್ ಗೆ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿಯವರ ನೇತೃತ್ವದ ಹೈಕೊರ್ಟ್ ಪೀಠ ಜಾಮೀನು ನೀಡಿರುವುದಾಗಿ ಗೊತ್ತಾಗಿದೆ.










