ನಾಳೆ ಪಶುವೈದ್ಯರಿಂದ ಪೋಸ್ಟ್ ಮಾರ್ಟಂ
ಅರಂತೋಡು ಗ್ರಾಮದ ಉಕ್ರಾಜೆ ಬೈಲು ಎಂಬಲ್ಲಿ ಕಾಡಲ್ಲಿ ಕಡವೆಯೊಂದರ ಮೃತದೇಹ ಇಂದು ಕಂಡುಬಂದಿದ್ದು ಸ್ಥಳೀಯರು ಮತ್ತು ಅರಣ್ಯ ಇಲಾಖಾಧಿಕಾರಿಗಳು ಮತ್ತು ಪಶುವೈದ್ಯರು ಅಲ್ಲಿಗೆ ಧಾವಿಸಿದ್ದಾರೆ. ಆದರೆ ಬೆಳಕಿನ ಕೊರತೆಯ ಕಾರಣದಿಂದ ನಾಳೆ ಬೆಳಿಗ್ಗೆ ಮತ್ತೆ ಅಲ್ಲಿಗೆ ಹೋಗಿ ಮರಣೋತ್ತರ ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಇಂದು ಸಂಜೆ ಆರು ಗಂಟೆ ಸುಮಾರಿಗೆ ಕಡವೆ ಮೃತದೇಹ ಪತ್ತೆಯಾಗಿರುವ ಮಾಹಿತಿ ನಮಗೆ ಲಭಿಸಿತು. ಕೂಡಲೇ ಸುಳ್ಯದ ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭುರವರನ್ನು ಕರೆದುಕೊಂಡು ಸ್ಥಳಕ್ಕೆ ಹೋದೆವು. ಕಡವರಯ ದೇಹ ಕೊಳೆಯಲು ಆರಂಭವಾಗಿದ್ದು, ಹುಳ ಹುಟ್ಟಿಕೊಂಡಿತ್ತು. ಎರಡು ದಿನಗಳ ಹಿಂದೆ ಮೃತಪಟ್ಟಿರಬೇಕೆಂದು ಅನಿಸುತ್ತದೆ. ಅದಾಗಲೇ ಕತ್ತಲಾಗುತ್ತಿದ್ದುದರಿಂದ ಬೆಳಕು ಕಡಿಮೆ ಇದ್ದು ಪೋಸ್ಟ್ ಮಾರ್ಟಂ ಸಾಧ್ಯವಾಗಿಲ್ಲ. ನಾಳೆ ಬೆಳಿಗ್ಗೆ ಪುನಹ ವೈದ್ಯರ ಜತೆಗೆ ಅಲ್ಲಿಗೆ ಹೋಗಿ ಕೂಲಂಕುಶ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ಕಾರಣ ಕಂಡುಹಿಡಿಯಲಾಗುವುದು ಎಂದು ಸುಳ್ಯ ರೇಂಜರ್ ಮಂಜುನಾಥ್ ಸುದ್ದಿಗೆ ತಿಳಿಸಿದ್ದಾರೆ.