ಸುಳ್ಯದ ಜಟ್ಟಿಪಳ್ಳ ದೀಕ್ಷಾ ಟ್ರೇಡರ್ಸ್ ನಲ್ಲಿ ಸೀರೆ ಹಬ್ಬ ಪ್ರಾರಂಭ

0
  • ಸೀರೆ ಖರೀದಿಸಿದ ನೂರಾರು ಜನ ಗ್ರಾಹಕರು

ಸುಳ್ಯದ ವಿಶ್ವ ಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ದೀಕ್ಷಾ ಟ್ರೇಡರ್ಸ್ ನಲ್ಲಿ ಸೀರೆಗಳ ಹಬ್ಬ ಆ.15 ರಂದು ಪ್ರಾರಂಭಗೊಂಡಿದ್ದು ಆ.16 ರವರೆಗೆ ನಡೆಯಲಿದೆ.


ವಾರ್ಷಿಕ ಆಟಿ ತಿಂಗಳ ಕೊನೆಯಲ್ಲಿ ನಡೆಯಲಿರುವ ಸೀರೆ ಮೇಳದಲ್ಲಿ ವಿವಿಧ ವಿನ್ಯಾಸದ ಸೀರೆಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ದೊರೆಯುತ್ತಿದ್ದು ನೂರಾರು ಜನ ಮಹಿಳೆಯರು ತಮಗಿಷ್ಟವಾದ ಸೀರೆಗಳನ್ನು ಖರೀದಿಸುತ್ತಿದ್ದಾರೆ.


ವಿವಿಧ ಕಂಪೆನಿಗಳ ಅಪಾರ ಸಂಗ್ರಹವಿದ್ದು ಗ್ರಾಹಕರಿಗೆ ಸೀರೆಗಳನ್ನು ಖರೀದಿಸಲು ವಿಶಾಲವಾದ ಮಳಿಗೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ವರ್ಷದಿಂದ ವರ್ಷ ವಿಜೃಂಭಿಸುವ ಸೀರೆ ಮೇಳದಲ್ಲಿ ಗ್ರಾಹಕರು ಸೀರೆಗಳನ್ನು ಆಯ್ಕೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದ್ದು ನಾಳೆಯೂ ಸೀರೆ ಹಬ್ಬ ನಡೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.