ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕಿಂಡರ್ ಗಾರ್ಡನ್ ಪುಟಾಣಿಗಳ ಹಣ್ಣುಗಳ ಹಬ್ಬ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಪ್ರೀಕೆಜಿ, ಎಲ್ ಕೆ ಜಿ ಮತ್ತು ಯು ಕೆ ಜಿ ಯ ಮಕ್ಕಳಿಗಾಗಿ ಹಣ್ಣುಗಳ ದಿನವನ್ನಾಗಿ ಅ.17ರಂದು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಶುಭ ಹಾರೈಸಿದರು.


ಈ ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಉದ್ಘಾಟಿಸಿ ‘ ಹಣ್ಣುಗಳ ಮಹತ್ವದ ಬಗ್ಗೆ ತಿಳಿಸಿ, ಅದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು’ ತಿಳಿಸಿದರು. ಬಳಿಕ ಮಾತನಾಡಿದ ಉಪ ಪ್ರಾಂಶುಪಾಲೆ ಶಿಲ್ಪಬಿದ್ದಪ್ಪ ‘ ದಿನಕ್ಕೆ ಒಂದು ಹಣ್ಣನ್ನು ತಿನ್ನಬೇಕು. ಇದರಿಂದ ನಮ್ಮ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ದೊರಕುತ್ತದೆ ‘ ಎಂಬ ಕಿವಿ ಮಾತನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಪ್ರತಿ ಪೋಷಕರು ಹಣ್ಣುಗಳ ಅಲಂಕಾರದೊಂದಿಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಟ್ಟರು. ಮಕ್ಕಳೆಲ್ಲರೂ ತಾವು ತಂದ ಹಣ್ಣುಗಳ ಮಹತ್ವದ ಬಗ್ಗೆ ತಮ್ಮ ಮುದ್ದು ಮುದ್ದಾದ ಮಾತುಗಳ ಮೂಲಕ ತಿಳಿಸಿ, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಬಳಿಕ ವಿದ್ಯಾರ್ಥಿಗಳು ತಂದ ಹಣ್ಣುಗಳನ್ನು ಕಿಂಡರ್ ಗಾರ್ಡನ್ ನ ಎಲ್ಲಾ ಮಕ್ಕಳು ಮತ್ತು ಎಲ್ಲಾ ಶಿಕ್ಷಕ – ಶಿಕ್ಷಕೇತರವೃಂದದವರು ತಿನ್ನುತ್ತಾ ವಿದ್ಯಾರ್ಥಿಗಳ ಸಂತೋಷಕ್ಕೆ ಕಾರಣರಾದರು.


ಈ ಕಾರ್ಯಕ್ರಮವನ್ನು ಶಿಕ್ಷಕಿ ಹರ್ಷಿತ ನಿರೂಪಿಸಿ , ನೀಲವೇಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.