ಸುಳ್ಯ ನಗರದ ಚರಂಡಿ ಸ್ಲ್ಯಾಬ್‌ಗಳ ಅವ್ಯವಸ್ಥೆ

0


ಏಕಕಾಲದಲ್ಲಿ ಚರಂಡಿಗೆ ಬಿದ್ದ ಇಬ್ಬರು ಬಡ ಕೂಲಿ ಕಾರ್ಮಿಕರ ಮೊಬೈಲ್ ಫೋನ್

ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಶ್ರೀ ಗಣೇಶ್ ಕಾಂಪ್ಲೆಕ್ಸ್ ಬಳಿ ಆಟೋದಿಂದ ಕೂಲಿ ಕಾರ್ಮಿಕರೊಬ್ಬರು ಆಟೋದಿಂದ ಇಳಿಯುತ್ತಿದ್ದ ಸಂದರ್ಭ ಇಬ್ಬರ ಕೈಯಲ್ಲಿದ್ದ ಮೊಬೈಲ್ ಫೋನ್ ಜಾರಿ ಚರಂಡಿಯ ಒಳಭಾಗಕ್ಕೆ ಬಿದ್ದು ಫೋನ್ ಹಾಳಾದ ಘಟನೆ ಇಂದು ಸಂಜೆ ನಡೆಯಿತು.

ಕೇರಳ ಮೂಲದ ಇಬ್ಬರು ಕಾರ್ಮಿಕರು ಆಟೋದಲ್ಲಿ ಬಂದು ಇಳಿದು ಆಟೋ ಚಾಲಕರಿಗೆ ಹಣ ನೀಡಲು ಜೇಬಿಗೆ ಕೈ ಹಾಕಿದ ಸಂದರ್ಭ ಅವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಜಾರಿ ಚರಂಡಿಯ ಸ್ಲ್ಯಾಬಿನ ಸೆರೆಯಿಂದ ಚರಂಡಿಯ ಒಳಭಾಗಕ್ಕೆ ಬಿದ್ದಿತ್ತು.


ಜೊತೆಯಲ್ಲಿದ್ದವರು ಬಿದ್ದ ಫೋನನ್ನು ನೋಡಲು ಬಾಗಿದಾಗ ಅವರ ಜೇಬಿನಲ್ಲಿದ್ದ ಮತ್ತೊಂದು ಫೋನ್ ಅದೇ ಚರಂಡಿಗೆ ಬಿದ್ದಿತ್ತು. ಈ ರೀತಿಯಾಗಿ ಏಕಕಾಲದಲ್ಲಿ ಎರಡು ಫೋನ್ ಗಳು ಬಿದ್ದು ಫೋನ್ ಕಳೆದುಕೊಂಡವರು ಸುಮಾರು ಅರ್ಧ ಗಂಟೆ ಚರಂಡಿ ನೀರಿನಲ್ಲಿ ಇಳಿದು ತಡಕಾಡಿ ಬಳಿಕ ಫೋನನ್ನು ಮೇಲಕ್ಕೆ ತೆಗೆದರು. ಅಷ್ಟೊತ್ತಿಗಾಗಲಿ ಫೋನಿನಲ್ಲಿ ನೀರು ಸೇರಿ ಫೋನ್ ಸಂಪೂರ್ಣವಾಗಿ ಹಾಳಾಗಿತ್ತು.

ಈ ಘಟನೆಯನ್ನು ನೋಡಿದ ಸ್ಥಳೀಯರು ಇದಕ್ಕೆ ಸಂಬಂಧಪಟ್ಟ ಇಲಾಖೆಗೆ ಇಡೀ ಶಾಪವನ್ನು ಹಾಕುತ್ತಿದ್ದರು. ಈ ಚರಂಡಿಯ ಸ್ಲಾಬ್ ತುಂಡಾಗಿ ಆರು ತಿಂಗಳೆ ಕಳೆದಿದ್ದರು ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸುವುದಿಲ್ಲ. ಈ ಭಾಗದಲ್ಲಿ ನಡೆದಾಡಿಕೊಂಡು ಹೋಗುವ ಶಾಲಾ ವಿದ್ಯಾರ್ಥಿಗಳಲ್ಲಿ ಕೆಲವರು ಇಲ್ಲಿ ಜಾರಿ ಬಿದ್ದ ಘಟನೆಯು ಸಂಭವಿಸಿದೆ. ದೊಡ್ಡ ಅನಾಹುತ ಒಂದು ಆಗದೆ ಅಷ್ಟರವರೆಗೆ ನಗರ ಪಂಚಾಯತ್ ನವರು ಇತ್ತ ತಲೆಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಸಾರ್ವಜನಿಕರು ಹೇಳುತ್ತಿರುವಂತೆ ಇಲ್ಲಿ ದೊಡ್ಡ ಅನಾಹುತ ಆಗುವುದಕ್ಕೆ ಮೊದಲು ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಬೇಕಾಗಿದೆ. ಈ ಬಗ್ಗೆ ಹಲವಾರು ಬಾರಿ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿದ್ದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸವೇ ಸರಿ.