ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ CISCE Board ನಿಯಮದಂತೆ ಹೂಡಿಕೆ ಸಮಾರಂಭs (INVESTITURE CEREMONY) ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ INVESTITURE CEREMONY ಯ ಉದ್ದೇಶವು ಎಲ್ಲಾ ವಿದ್ಯಾರ್ಥಿಗಳಲ್ಲೂ ಇರುವ ನಾಯಕತ್ವದ ಲಕ್ಷಣಗಳನ್ನು ಪ್ರೋತ್ಸಾಹಿಸುವುದು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೇಜರ್ ಸುಬೇದಾರ್ ಹಾನರರಿ ಲೆಫ್ಟಿನೆಂಟ್ ಆದ ವಾಸುದೇವ ಕಟ್ಟೆಮನೆಯವರು ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ನಾಯಕತ್ವದ ಗುಣಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ವಿವಿಧ ಉಪಘಟಕಗಳಿಗೆ ಆಯ್ಕೆಯಾದ ನಾಯಕ/ನಾಯಕಿಯರಿಗೆ ಬ್ಯಾಡ್ಜ್‌ಗಳನ್ನು ಅನಾವರಣಗೊಳಿಸಿ, ಪ್ರಮಾಣ ಪತ್ರವನ್ನು ಮುಖ್ಯ ಅತಿಥಿಗಳು ನೀಡಿದರು.
ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ಅವರು ಪ್ರಮಾಣವಚನವನ್ನು (OATH STATEMENT) ಮಕ್ಕಳಿಗೆ ಭೋದಿಸಿದರು ಮತ್ತು ಶಾಲಾ ನಾಯಕಿಯಾಗಿ ಆಯ್ಕೆಯಾದ ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಖುಶಿ.ಎ ಎ ನಾಯಕತ್ವದ ಪರವಾಗಿ ಅಂಗೀಕಾರದ ಭಾಷಣವನ್ನು ಮಾಡಿದಳು.