ಕೋಟೆಗುಡ್ಡೆ : ಬೀಳ್ಕೊಡುಗೆ ಸಮಾರಂಭ

0

ಸ. ಕಿ. ಪ್ರಾ ಶಾಲೆ. ಕೋಟೆಗುಡ್ಡೆಯಲ್ಲಿ ಹತ್ತು ವರ್ಷಗಳ ಕಾಲ ಶಿಕ್ಷಕ ಸೇವೆ ಸಲ್ಲಿಸಿ ಇದೀಗ ಪಿಜಕ್ಕಳ ಸ. ಕಿ. ಪ್ರಾ ಶಾಲೆಗೆ ವರ್ಗಾವಣೆಗೊಂಡ ಶಾಲಾ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ವೆಂಕಟ್ರಮಣ ರವರಿಗೆ ಬೀಳ್ಕೊಡುವ ಮತ್ತು ಗೌರವರ್ಪಣೆ ಕಾರ್ಯಕ್ರಮವು ಆ.26ರಂದು ಸ. ಕಿ ಪ್ರಾ ಶಾಲೆ ಕೋಟೆಗುಡ್ಡೆ ಯಲ್ಲಿ ನಡೆಯಿತು.


ಸಭಾಧ್ಯಕ್ಷತೆಯನ್ನು ಎಸ್. ಡಿ ಎಂ. ಸಿ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ
ವಹಿಸಿ ದೀಪ ಪ್ರಜ್ವಲಿಸಿದರು.
ಮುಖ್ಯ ಅತಿಥಿ ಕುಂಞಪ್ಪ ಗೌಡ ಪೆರ್ಮಾಜೆ ರವರು ಗೌರವರ್ಪಣೆ ಮಾಡಿದರು .ರವಿಪ್ರಸಾದ್ ನೆಕ್ರಕಜೆ ಅಭಿನಂದನಾ ಮಾತುಗಳನ್ನಾಡಿದರು ಪ್ರಬಾರ ಮುಖ್ಯ ಶಿಕ್ಷಕಿ ಶ್ರೀಮತಿ ಸುಗಂಧಿ ರವರು ನಿರೂಪಿಸಿ ಪ್ರಾಸ್ತವಿಕಗೈದರು.
ಗೌರವ ಶಿಕ್ಷಕಿ ಶ್ರೀಮತಿ ಶಶಿಕಲಾ ಸ್ವಾಗತಿಸಿದರು. ಶ್ರೀಮತಿ ಕುಮುದಾಕ್ಷಿ ಎಸ್. ಡಿ ಎಂ ಸಿ ಸದಸ್ಯೆ ವಂದಿಸಿದರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.