ವಿಶ್ವವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯ ಇವರಿಗೆ ವನಜ ರಂಗನೆ ಪ್ರಶಸ್ತಿ ಪ್ರದಾನ

0

ಸುಳ್ಯದ ರಂಗಮನೆಯಲ್ಲಿ ಝೇಂಕರಿಸಿದ ಚೆಂಡೆ ಮದ್ದಳೆ-ಮನಸೂರೆಗೊಂಡ ಯಕ್ಷ ಸಂಭ್ರಮ

ಸುಳ್ಯದ ಪ್ರಸಿದ್ಧ ರಂಗಮನೆ ಸಾಂಸ್ಕ್ರತಿಕ ಕಲಾ ಕೇಂದ್ರದ ವತಿಯಿಂದ ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷ ಸಂಭ್ರಮ ಆ.27ರಂದು ಸುಳ್ಯದ ಹಳೇಗೇಟಿನ ರಂಗಮನೆ ಆಡಿಟೋರಿಯಂನಲ್ಲಿ ನಡೆಯಿತು.

ಸಂಜೆ 5.45ಕ್ಕೆ ಸುಜಾನ ಯಕ್ಷ ಶಿಕ್ಷಣ ಕೇಂದ್ರದ ಹಿಮ್ಮೇಳ ಕಲಾವಿದರಿಂದ ಚೆಂಡೆ ಮದ್ದಳೆ ಝೇಂಕಾರ‌ ನಡೆಯಿತು.‌

ಸಂಜೆ 6.10ಕ್ಕೆ ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ‌ ಕಾರ್ಕಳ ತಾಲೂಕು ಇವರಿಂದ ಪ್ರಶಸ್ತಿ ವಿಜೇತ ರಂಗಶಿಸ್ತಿನ ಯಕ್ಷಗಾನ ಶರಣ ಸೇವಾ ರತ್ನ ನಡೆಯಿತು. ‌‌‌‌‌


7.10ಕ್ಕೆ ವಿಶ್ವ ವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯ ಇವರಿಗೆ 2022 ಮತ್ತು 2023ನೇ ವರ್ಷದ ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.‌

ಸಮಾರಂಭದಲ್ಲಿ ಶಾಸಕಿ ಕು| ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ, ಸಮಾರಂಭವನ್ನು ಉದ್ಘಾಟಿಸಿದರು.
ಕೃಷ್ಣ ಮೂರ್ತಿ ಮುಖ್ಯ ಅತಿಥಿಯಾಗಿದ್ದರು.


ರಂಗಮನೆಯ ಹಿರಿಯ ಯಕ್ಷಗಾನ ಕಲಾವಿದರಾದ ಸುಜಾನ ಸುಳ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಶ್ವ ವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯ ಇವರಿಗೆ 2022 ಮತ್ತು 2023ನೇ ವರ್ಷದ ವನಜ ರಂಗಮನೆ ಪ್ರಶಸ್ತಿ ಪ್ರದಾನ ನಡೆಯಿತು.

ಬಳಿಕ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಮೂಡಬಿದಿರೆ ಇವರಿಂದ ಪ್ರಶಸ್ತಿ ವಿಜೇತ ರಂಗಶಿಸ್ತಿನ ಯಕ್ಷಗಾನ ನರ ಶಾರ್ದೂಲ ನಡೆಯಿತು.‌

ಸಾಯಿನಕ್ಷತ್ರ ಮಜಿಕೋಡಿ ಪ್ರಾರ್ಥಿಸಿದರು. ರಂಗಮನೆ ನಿರ್ದೇಶಕ ಜೀವನ್ ರಾಂ ಸುಳ್ಯ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು‌‌.