ಬೆಳ್ಳಾರೆಯಲ್ಲಿ 169 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ,ಸನ್ಮಾನ

0

ಸಂಘಟನಾತ್ಮಕ ಕೆಲಸದಿಂದ ಸಮಾಜದ ಅಭಿವೃದ್ಧಿ – ಭಾಗೀರಥಿ ಮುರುಳ್ಯ

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ,ಯುವವಾಹಿನಿ ಸುಳ್ಯ ಘಟಕ ಮತ್ತು ಬಿರುವೆರ್ ಕುಡ್ಲ ಸುಳ್ಯ ಘಟಕ ಹಾಗೂ ಬಿಲ್ಲವ ಮಹಿಳಾ ಘಟಕ ಸುಳ್ಯ ಇವರ ಜಂಟಿ ಆಶ್ರಯದಲ್ಲಿ 169 ನೇ ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ,ಸನ್ಮಾನ ಕಾರ್ಯಕ್ರಮವು ಸೆ.03 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.


ಶಾಸಕಿ ಕು. ಭಾಗೀರಥಿ ಮುರುಳ್ಯರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಸುಳ್ಯ ಇದರ ಅಧ್ಯಕ್ಷ ಎನ್.ಎಸ್.ಡಿ.ವಿಠಲದಾಸ್ ರ ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದ ಹಾಗೂ ನಿರೂಪಕರಾದ ರಾಜೇಶ್ ಎಸ್.ಬಲ್ಯ ಧಾರ್ಮಿಕ ಉಪನ್ಯಾಸ ನೀಡಿದರು.


ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್ ,ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷ ಜನಾರ್ಧನ ಪೂಜಾರಿ ಅಲೆಕ್ಕಾಡಿ,ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ, ಸುಳ್ಯ ಯುವವಾಹಿನಿ ಅಧ್ಯಕ್ಷ ಲೋಹಿತ್ ರೆಂಜಾಳ, ಬಿರುವೆರ್ ಕುಡ್ಲ ಸುಳ್ಯ ಇದರ ಅಧ್ಯಕ್ಷ ಭಾಸ್ಕರ ಕೋಟ್ಯಾನ್ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ

ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಸಂಜೀವ ಪೂಜಾರಿ ಕೊಲ್ಯ, ಮೂರ್ತೆದಾರರ ಕ್ಷೇತ್ರದಲ್ಲಿ ದೇರಣ್ಣ ಪೂಜಾರಿ ದಾಸನಮಜಲು,ಕೋಟಿಚೆನ್ನಯ್ಯ ಗರಡಿಯಲ್ಲಿ ಚಾಕರಿ ಕೆಲಸ ಮಾಡುವ ಕೋಟಿ ಪೂಜಾರಿ ಕುಬಲಾಡಿ, ದೈವದ ಪಾರಿಕೆ ಧರ್ಮಪಾಲ ಪೂಜಾರಿ ಶೇಣಿ, ದೈವಾರಾಧಕ ಕೃಷ್ಣಪ್ಪ ಪೂಜಾರಿ ಬೇಳ್ಯ, ಉದ್ಯಮ ಕ್ಷೇತ್ರದಲ್ಲಿ ವಸಂತ ಪೂಜಾರಿ ಸಾರಕರೆ ಪೆರುವಾಜೆ, ತುಳುಲಿಪಿ ಸಾಧಕ ಪ್ರದೀಪ್ ಪೂಜಾರಿ ಕೊಯಿಲ ರವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಎಸ್.ಎಸ್.ಎಲ್.ಸಿಯಲ್ಲಿ 622 ಅಂಕದೊಂದಿಗೆ ರಾಜ್ಯದಲ್ಲಿ 4 ನೇ ಸ್ಥಾನ ಪಡೆದ ದ್ವಿತಿ ಎಸ್.ಸಾರಕರೆಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಬಿಲ್ಲವ ಸಮಾಜದ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಗೌರವಾರ್ಪಣೆ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ, ಪದ್ಮರಾಜ್ ಆರ್ ರವರನ್ನು ಸನ್ಮಾನಿಸಲಾಯಿತು.

ನವೀನ್ ಕುಮಾರ್ ಸಾರಕರೆ ಸ್ವಾಗತಿಸಿ, ಪೂರ್ವಿಕ ಸಾರಕರೆ , ಪ್ರಾರ್ಥನಾ ಸಾರಕರೆ ಪ್ರಾರ್ಥಿಸಿ, ಧರ್ಮಪಾಲ ಶೇಣಿ, ಬೃಂದಾ ಎಸ್.ಪೂಜಾರಿ ಮುಕ್ಕೂರು ಕಾರ್ಯಕ್ರಮ ನಿರೂಪಿಸಿ, ..ವಂದಿಸಿದರು.
ಪುರೋಹಿತ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು.


ಬೆಳಿಗ್ಗೆ ಯುವವಸಹಿನಿ ಕಡಬ ಘಟಕ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘ, ಯುವವಾಹಿನಿ ಸುಳ್ಯ ಘಟಕ,ಬಿರುವೆರ್ ಕುಡ್ಲ
ಘಟಕ ಹಾಗೂ ಬಿಲ್ಲವ ಮಹಿಳಾ ಘಟಕ ಸುಳ್ಯ ದ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.