ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘ ಸುಳ್ಯ ತಾಲೂಕಿನ ಪ್ರಥಮ ಉತ್ತಮ ಸಂಘ ಪ್ರಶಸ್ತಿ

0

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ 37ನೇ ವಾರ್ಷಿಕ ಮಹಾಸಭೆಯಲ್ಲಿ ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಫಕ್ಕೆ 2022-2023 ನೇ ಸಾಲಿನ ಸುಳ್ಯ ತಾಲೂಕಿನ ಪ್ರಥಮ ಉತ್ತಮ ಸಂಘವೆಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಡಮಂಗಲ ಹಾಲು ಸೊಸೈಟಿಯು ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನವನ್ನು ಪಡೆಯಿತು.

ಪ್ರಶಸ್ತಿಯನ್ನು ಒಕ್ಕೂಟದ ಅಧ್ಯಕ್ಷ ಕೆ ಪಿ. ಸುಚರಿತ ಶೆಟ್ಟಿ ಅವರು ನೀಡಿ ಸನ್ಮಾನಿಸಿದರು.
ಎಡಮಂಗಲ ಹಾಲು ಸೊಸೈಟಿ ಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಕಟ್ಟಬೀಡು ಮತ್ತು ಕಾರ್ಯದರ್ಶಿಗಳಾದ ಮಾಧವ ವೈ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಜಗದೀಶ್ ಶೆಟ್ಟಿ, ಎ.ಜೆ ಜೋಸ್ ಉಪಸ್ಥಿತರಿದ್ದರು.