ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ರೂ.126.5 ಕೋಟಿಗೂ ಮಿಕ್ಕಿ ವ್ಯವಹಾರ

0

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನವಾರ್ಷಿಕ ಮಹಾಸಭೆಯು ಸೆ.17 ರಂದು ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು.


ಸಂಘವು ರೂ.126ಕೋಟಿ 50 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.25 ಲಕ್ಷದ 38,596 ನಿವ್ವಳ ಲಾಭಗಳಿಸಿದೆ.ರೂ. 2,11,82,059.87 ವಿವಿಧ ನಿಧಿಗಳಿವೆ.ರೂ.15,09,23,814.90
ವಿವಿಧ ಠೇವಣಾತಿಗಳು ಇದೆ. ಆಡಿಟ್ ವರ್ಗೀಕರಣದಲ್ಲಿ ತರಗತಿಯಲ್ಲಿ ಸಂಸ್ಥೆಯು ‘ಎ”ಮುನ್ನಡೆಯುತ್ತಿದೆ.ಎಂದು ಅವರು ಹೇಳಿದರು. ಶೇ.6ಡಿವಿಡೆಂಡ್ ಘೋಷಿಸಲಾಯಿತು.


ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಎನ್ ಜಿ, ನಿರ್ದೇಶಕರಾದ ಎ ಗಂಗಾಧರ ಗೌಡ, ಮಹಾಬಲ ಕೆ, ನಾರಾಯಣ ಕೆ ಕೆ, ಶ್ರೀಮತಿ ಸುಧಾ ಎಸ್ ಭಟ್, ಶ್ರೀಮತಿ ಲಲಿತ ಪಿ, ಮಹಮ್ಮದ್ ಹನೀಫ್, ರಾಮ ನಾಯ್ಕ ಯು, ಕರುಣಾಕರ ಜೆ, ಶೇಷಪ್ಪ ಎ ವಿ, ಮೋಹನ್ ಕೆ ,ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿ ನಾರಾಯಣ ಪ್ರಾರ್ಥಿಸಿದರು. ಲಕ್ಷ್ಮೀನಾರಾಯಣ ಎನ್ ಜಿ ಸ್ವಾಗತಿಸಿದರು. ಕಳೆದ ಸಾಲಿನ ವರದಿಯನ್ನು ವ್ಯವಸ್ಥಾಪಕಿ ಶ್ರೀಮತಿ ಪೂವಕ್ಕ ಪಿ ವಾಚಿಸಿದರು. ಸಂಘದ ಸಿಬ್ಬಂದಿ ಪುನೀತ್ ಮೂಲೆಮನೆ ನಿರೂಪಿಸಿದರು. ಪ್ರಸ್ತುತ ಸಾಲಿನ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವಾಚಿಸಿದರು. ಸಂಘದ ಸಿಬ್ಬಂದಿ ಅಶ್ವತ್ ಕುಳ್ಸಿಗೆ ವಂದಿಸಿದರು.ಶಾಖಾಧಿಕಾರಿ ಶ್ರೀಮತಿ ಸುಮಿತ್ರ ಎ ಸಹಕರಿಸಿದರು.