ಬಾಲಾವಲಿಕಾರ್ \ ರಾಜಾಪುರ ಸಾರಸ್ವತ ಸಮಾಜದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಹೇಮಂತ ಕುಮಾರ್ ಕಂದಡ್ಕರವರ ಅಧ್ಯಕ್ಷತೆಯಲ್ಲಿ ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರ ಕೇರ್ಪಳದಲ್ಲಿ ನಡೆಯಿತು.
ವೇದಿಕೆಯಲ್ಲಿ ಕಾರ್ಯದರ್ಶಿ ಮೋಹನ ಕೆ. ಪರಿವಾರಕಾನ, ಕೋಶಾಧಿಕಾರಿ ದೇವದಾಸ ಪ್ರಭು ಬಿ. ಅಟಲನಗರ, ನಿರ್ದೇಶಕರಾದ ಅನಂತ ಚಾಕೋಟೆ, ನಾಗರಾಜ ಮುಳ್ಯ, ಸೀತಾರಾಮ ಪೈ ಜಿ.ಎಸ್. ಗೊರನಗುಂಡಿ, ಉಮೇಶ ಪ್ರಭು ಕುಂಠಿಹಿತ್ಲು, ಧನಂಜಯ ಕುಮಾರ್ ಕೋಟೆಮಲೆ, ದಯಾನಂದ ಚಾರ್ಮಕ, ಶ್ರೀಮತಿ ವಿದ್ಯಾ ಕೋಟೆಮಲೆ, ಸಂಜೀವ ನಾಯಕ್ ಸೋಣಂಗೇರಿ, ದೇವದಾಸ್ ಎಸ್.ಪಿ. ಓಡಬಾಯಿ, ಶ್ರೀಮತಿ ಅನಿತಾ ಕಾಯರ್ತೋಡಿ, ವಾಸುದೇವ ನಾಯಕ್ ಐಗಳಮಕ್ಕಿ, ಭಾಸ್ಕರ ನಾಯಕ್ ಬೇರ್ಯ ಪಂಜ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಮೇಲ್ಪಟ್ಟು ವ್ಯಾಸಂಗ ಮಾಡುತ್ತಿರುವ ಸಮಾಜದ ಸಾಧಕ ವಿದ್ಯಾರ್ಥಿಗಳನ್ನು ಮತ್ತು ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.
ಧನಂಜಯ ಕುಮಾರ್ ಕೋಟೆಮಲೆ ಸಾಧಕರ ಪಟ್ಟಿ ವಾಚಿಸಿದರು.