ಜಟ್ಟಿಪಳ್ಳ ಶ್ರೀರಾಮ ಭಜನಾ ಸೇವಾ ಸಂಘದಿಂದ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0

ಸುಳ್ಯ ಜಟ್ಟಿಪಳ್ಳದ ಶ್ರೀರಾಮ ಭಜನಾ ಸೇವಾ ಸಂಘದ ಆಶ್ರಯದಲ್ಲಿ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 19 ರಂದು ಜಟ್ಟಿಪಳ್ಳದ ಶ್ರೀ ಚೆನ್ನಕೇಶವ ದೇವರ ಕಟ್ಟೆಯಲ್ಲಿ ನೆರವೇರಲಿದೆ.
ಅಂದು ಬೆಳಿಗ್ಗೆ ಎಂಟು ಗಂಟೆಗೆ ಗಣಪತಿ ಹವನ ದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಹಿಲ್ ಸೈಡ್ ಮನೆಯ ಶ್ರೀಮತಿ ಅರುಂಧತಿ ಜಯಚಂದ್ರ ಮತ್ತು ಮಕ್ಕಳು ಗಣಪತಿ ಹವನದ ಸೇವಾರ್ಥಿಗಳಾಗಿ ಸಹಕರಿಸುವರು. ಪೂರ್ವಾಹ್ನ 10 ಗಂಟೆಗೆ ಶ್ರೀ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯುವುದು. ಜಟ್ಟಿಪಳ್ಳದ ಶ್ರೀಮತಿ ರೇಖಾ ಗಣೇಶ್ ಹೆಗ್ಡೆ ಮತ್ತು ಮಕ್ಕಳು ವಿಗ್ರಹದಾನಿಗಳಾಗಿದ್ದಾರೆ.
ಬಳಿಕ ಭಜನಾ ಕಾರ್ಯಕ್ರಮ ಆರಂಭಗೊಳ್ಳುವುದು. ಶ್ರೀ ಚೆನ್ನಕೇಶವ ಮಹಿಳಾ ಭಜನಾ ಮಂಡಳಿ ಸುಳ್ಯ, ಭಾವನ ಸಂಗೀತ ಶಾಲೆ ಜಟ್ಟಿಪಳ್ಳ ಶಾಖೆ ಮತ್ತು ಮಾನಸ ಮಹಿಳಾ ಮಂಡಲ ಸದಸ್ಯರು ಭಜನಾ ಕಾರ್ಯಕ್ರಮ ನೆರವೇರಿಸಿಕೊಡುವರು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುವುದು. ಸಿಹಿ ತಿಂಡಿಯ ಪ್ರಾಯೋಜಕರಾಗಿ ಮೆ. ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ನವರು ಸಹಕರಿಸುವರು.
ಅಪರಾಹ್ನ ಮೂರು ಗಂಟೆಗೆ ಮಹಾಪೂಜೆ ನಡೆದು, 3.30ಕ್ಕೆ ಶೋಭಾಯಾತ್ರೆ ಆರಂಭಗೊಳ್ಳುವುದು. ಬೊಳಿಯಮಜಲು ಹೊಳೆಯಲ್ಲಿ ಜಲಸ್ತಂಭನ ನೆರವೇರಿಸಲಾಗುವುದು.