ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ವಾರ್ಷಿಕ ಮಹಾಸಭೆ

0

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ಸಂಘದ ವಾರ್ಷಿಕ ಮಹಾಸಭೆಯು ಸೆ.17 ರಂದು ಅಯ್ಯನಕಟ್ಟೆ ಪಂಡಿತ್ ದೀನ್ ದಯಾಳ್ ಸಮುದಾಯ ಭವನದಲ್ಲಿ ನಡೆಯಿತು.


ಕುಲಾಲ ಸುಧಾರಕ ಸೇವಾ ಸಂಘದ ಅಧ್ಯಕ್ಷ ಶೈಲೇಶ್ ನೆಟ್ಟಾರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಕಾರ್ಯದರ್ಶಿ ಚಂದ್ರಶೇಖರ ಬಸ್ತಿಗುಡ್ಡೆ ವರದಿ ಮಂಡಿಸಿದರು.
ಮುಡಿಪು ಕುಲಾಲ ಸಂಘದ ಅಧ್ಯಕ್ಷ ಯು.ಪುಂಡರೀಕಾಕ್ಷ ಮೂಲ್ಯ , ಉಡುಪಿ ವಿದ್ಯೋದಯ ಪದವಿಪೂರ್ವ ಕಾಲೇಜು ಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸೌಮ್ಯ ಕಜೆಕಾರ್ ಅತಿಥಿಗಳಾಗಿದ್ದು ಮಾತನಾಡಿದರು.


ಎಸ್.ಎಸ್.ಎಲ್.ಸಿಯಲ್ಲಿ ಶೇ 80 ಮತ್ತು ಪಿಯುಸಿಯಲ್ಲಿ ಶೇ.75 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಕೇಶವ ಪಂಜಿಗಾರು,ಸಂಘದ ಉಪಾಧ್ಯಕ್ಷೆ ನಮಿತಾ ಉಮೇಶ್ ಪಂಜಿಗಾರು, ಕಾರ್ಯದರ್ಶಿ ಚಂದ್ರಶೇಖರ ಬಸ್ತಿಗುಡ್ಡೆ, ದಳಪತಿ ವಿಶ್ವನಾಥ ಪೆಲತ್ತಮೂಲೆ, ಕ್ರೀಡಾಕಾರ್ಯದರ್ಶಿ ಸುಪ್ರೀತ್ ಬಸ್ತಿಗುಡ್ಡೆ, ನಿರ್ದೇಶಕರಾದ ರತ್ನಾವತಿ ಪಂಜಿಗಾರು,ದೀಪ್ತಿ ಮಣಿಮಜಲು, ಲತೇಶ್ ಕಲ್ಮಡ್ಕ, ಸುಕುಮಾರ್ ಸುಬ್ರಹ್ಮಣ್ಯ, ಬಾಬು ಮೂಲ್ಯ ಪೆಲತ್ತಮೂಲೆ, ಪುಷ್ಪರಾಜ್ ಮಜಿಗುಂಡಿ , ಗೌರವ ಸಲಹೆಗಾರರಾದ ಶಶಿಧರ ಕುಲಾಲ್ ಪಂಜಿಗಾರು ಉಪಸ್ಥಿತರಿದ್ದರು.
ನಿತ್ಯಶ್ರೀ ಪಂಜಿಗಾರು ಪ್ರಾರ್ಥಿಸಿದರು.
ಸಭಾ ಕಾರ್ಯಕ್ರಮ ನಡೆದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.