ಪಾಲೆಪ್ಪಾಡಿಯಲ್ಲಿ ವಿಜೃಂಭಿಸಿದ 31 ನೇ ವರ್ಷದ ಶ್ರೀ ಗಣೇಶೋತ್ಸವ

0

ಶ್ರೀ ಗಣೇಶ ಮೂರ್ತಿಯ ವೈಭವದ ಶೋಭಾಯಾತ್ರೆ- ನೂರಾರು ಜನ ಭಾಗಿ

ಐವರ್ನಾಡು ಗ್ರಾಮದ ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾಲೆಪ್ಪಾಡಿ ವತಿಯಿಂದ 31 ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಸೆ.19 ರಂದು ಮಂಜುಶ್ರೀ ಕ್ರೀಡಾಂಗಣ ದರ್ಖಾಸ್ತು ಪಾಲೆಪ್ಪಾಡಿಯಲ್ಲಿ ವಿಜೃಂಭಣೆಯಿಂದ ನಡೆಯಿತು.


ಬೆಳಿಗ್ಗೆ ಶ್ರೀ ಗಣಪತಿ ಹವನ ಹಾಗೂ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.
ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕು.ರಶ್ಮಿತಾ ಪರ್ಲಿಕಜೆ ಇವರನ್ನು ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ಶಾಂತರಾಮ ಕಣಿಲೆಗುಂಡಿ , ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸದಸ್ಯರಾದ ಮಮತ ಉದ್ದಂಪಾಡಿ,ಯೋಗೀಶ ಕಲ್ಲಗದ್ದೆ,ಸುಂದರಲಿಂಗಂ ,ಜಯಪ್ರಸಾದ್ ಕಜೆತ್ತಡ್ಕ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪೂರ್ವಾಹ್ನ ಮಂಜುಶ್ರೀ ಭಜನಾ ಮಂಡಳಿ ಪಾಲೆಪ್ಪಾಡಿ ಮತ್ತು ಶ್ರೀ ಗುರುದೇವಾನಂದ ಭಜನಾ ಮಂಡಳಿ ಐವರ್ನಾಡು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.


ಮಧ್ಯಾಹ್ನ ಶ್ರೀ ಇರ್ವೆರ್ ಉಳ್ಳಾಕುಲು ಭಜನಾ ಮಂಡಳಿ ಪಾಲೆಪ್ಪಾಡಿ ಇದರ ಸದಸ್ಯರಿಂದ ಕುಣಿತ ಭಜನೆ ನಡೆಯಿತು.
ಸಂಜೆ ಶ್ರೀ ಗಣೇಶನ ಶೋಭಾಯಾತ್ರೆಯು ಚೆಂಡೆ,ವಾದ್ಯ ಘೋಷಗಳೊಂದಿಗೆ ಪಾಲೆಪ್ಪಾಡಿಯಿಂದ ಹೊರಟು ಐವರ್ನಾಡು ಮುಖ್ಯರಸ್ತೆಯಲ್ಲಿ ಸಾಗಿ ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಗುವುದು.
ಶೋಭಾಯಾತ್ರೆಯಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹರೀಶ್ ರಾವ್ ಉದ್ದಂಪಾಡಿ,ಅಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಕಾರ್ಯದರ್ಶಿ ಸುರೇಶ್ ಗೌಡ ಕಟ್ಟತ್ತಾರು ಮಂಜುಶ್ರೀ ಗೆಳೆಯರ ಬಳಗದ ಗೌರವಾಧ್ಯಕ್ಷ ನಟರಾಜ್ ಸಿ.ಕೂಪ್, ಅಧ್ಯಕ್ಷ ಶಿವಪ್ರಸಾದ್ ದರ್ಖಾಸ್ತು, ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ಹಾಗೂ ಸರ್ವಸದಸ್ಯರು ,ನೂರಾರು ಜನ ಭಕ್ತಾದಿಗಳು ಪಾಲ್ಗೊಂಡಿದ್ದರು.