ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ-ರಜತ‌ ಸಂಭ್ರಮ ಸಭಾ ಕಾರ್ಯಕ್ರಮ

0

ಸಾರ್ವಜನಿಕ ಉತ್ಸವಗಳಿಂದ ಧರ್ಮ ಜಾಗೃತಿ : ಒಡಿಯೂರು ಶ್ರೀ

ಪಂಜ ಗಣೇಶೋತ್ಸವ ಸಾರ್ವಜನಿಕ ಆಚರಣೆಗೆ ಮೇಲ್ಪಂಕ್ತಿ : ನಾಯರ್ ಕೆರೆ

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2023 ಇದರ ವತಿಯಿಂದ ಜರಗುವ
ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ-ರಜತ ಸಂಭ್ರಮ ಪ್ರಯುಕ್ತ ಸೆ.19ರಂದು ಸಂಜೆ ಸಭಾ ಕಾರ್ಯಕ್ರಮ ಜರಗಿತು.

ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ
“ಬದುಕಿನಲ್ಲಿ ಒಳ್ಳೆಯದನ್ನು ಮೈಗೂಡಿಸಲು ಇಂತಹ ಕಾರ್ಯಕ್ರಮಗಳಲ್ಲಿ ಬೆರೆಯ ಬೇಕು.

ಮಕ್ಕಳು ಇವುಗಳಲ್ಲಿ ಬೆರೆತಾಗ ಅವರಿಗೆ ಧರ್ಮ ಸಂಸ್ಕೃತಿ ಪರಿಚಯವಾಗುತ್ತದೆ. ಪಂಜದಲ್ಲಿ ಯುವ ಶಕ್ತಿ ಎದ್ದು ನಿಂತಿದೆ. ಬೆಳ್ಳಿ ವರುಷ ಆಚರಿಸಿದ ಈ ಸಂಘಟನೆ ಮುಂದೆ ಚಿನ್ನದ ವರ್ಷವನ್ನು ಆಚರಿಸಲಿ” ಎಂದು ಹೇಳಿದರು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಪ್ರಧಾನ ಭಾಷಣ ಮಾಡಿ ,” ಸಾರ್ವಜನಿಕ ಉತ್ಸವಗಳು ಹೇಗಿರಬೇಕು ಎನ್ನುವುದಕ್ಕೆ ಪಂಜ ಗಣೇಶೋತ್ಸವ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ತನ್ನ ವಿನೂತನ ಚಿಂತನೆಯಿಂದ ಇಲ್ಲಿಯ ಆರಾಧನ ಸಮಿತಿ ಸಮಾಜಕ್ಕೆ ಮಾದರಿಯಾಗಿದೆ” . ಎಂದು ಹೇಳಿದರು.

ಪಂಜ ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ಸಭಾಧ್ಯಕ್ಷತೆ ವಹಿಸಿದ್ದರು. . ಸಾರ್ವಜನಿಕ ಶ್ರೀ ಗಣೇಶೋತ್ಸವದ 25 ವರ್ಷಗಳ ಅಧ್ಯಕ್ಷರುಗಳಿಗೆ ಮತ್ತು ಆರಾಧನಾ ಸಮಿತಿಯ

ಅಧ್ಯಕ್ಷರಿಗೆ,ಪೂರ್ವಾಧ್ಯಕ್ಷರುಗಳಿಗೆ ಅರ್ಚಕರಿಗೆ ಸನ್ಮಾನ ಜರುಗಿತು. ಆರಾಧನಾ ಸಮಿತಿಯ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ ರವರು ಸನ್ಮಾನಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು, ಆರಾಧನಾ ಸಮಿತಿಯ ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಮಾ ಕೋಟೆ ಪ್ರಾರ್ಥಿಸಿದರು. ಸವಿತಾರ ಮುಡೂರು ಸ್ವಾಗತಿಸಿದರು. ತೀರ್ಥಾನಂದ ಕೊಡೆಂಕಿರಿ ಸನ್ಮಾನಿತರನ್ನು ಪರಿಚಯಿಸಿದರು. ಸೋಮಶೇಖರ ನೇರಳ ನಿರೂಪಿಸಿದರು. ಗುರುಪ್ರಸಾದ್ ತೋಟ ವಂದಿಸಿದರು.
.

ಸಾಂಸ್ಕೃತಿಕ ಕಾರ್ಯಕ್ರಮ:
. ಸಂಜೆ ರಂಜನಿ ಸಂಗೀತ ಸಭಾ -ಪಂಜ ಶಾಖೆ ಯವರ ಪ್ರಸ್ತುತಿಯ ಲಘು ಸಂಗೀತ,ಕೆ ಎಸ್ ಎಸ್ ಕಾಲೇಜು ಸುಬ್ರಮಣ್ಯ ಸಾಂಸ್ಕೃತಿಕ ಕಲಾ ತಂಡ ಪ್ರಸ್ತುತಿಯ ‘ನೃತ್ಯ ವೈಭವ ‘ ಜರುಗಿತು.

ಪೂರ್ವಾಹ್ನ ಪ್ರತಿಷ್ಠೆ ಗಣಪತಿ ಹೋಮ,ರಜತ ಸಂಭ್ರಮದ ಸವಿನೆನಪಿಗಾಗಿ ಶ್ರೀ ಮಹಾಗಣಪತಿಗೆ
ಬೆಳ್ಳಿ ಕಿರೀಟ ಸಮರ್ಪಣೆ, ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ,ಶ್ರೀ ಶಾರದಾಂಬಾ ಭಜನೆ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ಜರುಗಿತು.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ, ಸಂಜೆ ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ಜರುಗಿತು ರಾತ್ರಿ ಮಹಾಪೂಜೆ ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರುಗಿತು.

ಸೆ.20: ಕಾರ್ಯಕ್ರಮಗಳು :
ಸೆ.20. ರಂದು ಪೂರ್ವಾಹ್ನ ಬೆಳಗಿನ ಪೂಜೆ, ಕೇನ್ಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ , ಅಳ್ಪೆ ಚಿಂಗಾಣಿ ಗುಡ್ಡೆ ಶ್ರೀ ವಿಷ್ಣು ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ ಪಂಜ ವನಿತಾ ಮಹಿಳಾ ಭಜನಾ ಮಂಡಳಿ,ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ.

ಸಭಾ ಕಾರ್ಯಕ್ರಮ:
ರಾತ್ರಿ ಗಂಟೆ 7 ರಿಂದ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯ ಅಧ್ಯಕ್ಷ ಸವಿತಾರಾ ಮುಡೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬೆಂಗಳೂರು ಉದ್ಯಮಿ ಡಿ ಕಿರಣ್ ಚಂದ್ರ ಪಾಲ್ಗೊಳ್ಳಲಿದ್ದಾರೆ. ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹವ್ಯಾಸಿ ಯಕ್ಷಗಾನ ಅರ್ಥದಾರಿ ಜಯಪ್ರಕಾಶ್ ಎಂ ಆರ್ ಉಪನ್ಯಾಸ ನೀಡಲಿದ್ದಾರೆ.

ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ಉಪಸ್ಥಿತರಿರುವರು.
ರಾತ್ರಿ 8.30ರಿಂದ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ :
ಸಂಜೆ ಗಂಟೆ 6ರಿಂದ ಜೀವನ್ ಬೆಳ್ಳಾರೆ ನಿರ್ದೇಶನದ ಡ್ಯಾನ್ಸ್ & ಬೀಟ್ ನೃತ್ಯ ಕಲಾ ಕೇಂದ್ರ ಪಂಜ ಪ್ರಸ್ತುತಿಯ ನೃತ್ಯ ವೈವಿಧ್ಯ.ರಾತ್ರಿ 8.30ರಿಂದ ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣ ಬೆಂಗಳೂರು ಪ್ರಸ್ತುತಿಯ ಭಕ್ತಿ ಗಾನ ಸುಧೆ ನಡೆಯಲಿದೆ.

ಸೆ .21: ಶೋಭಾಯಾತ್ರೆ ಜಲಸ್ತಂಭನ:
ಸೆ. 21ರಂದು ಪೂರ್ವಾಹ್ನ ಗಂಟೆ 8.15 ರಿಂದ ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ , ಓಂಕಾರ ಭಜನಾ ಮಂಡಳಿ ಎಣ್ಮೂರು ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.

ಸಂಜೆ ಗಂಟೆ 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ

ತುಳುನಾಡಿನ ಹೆಮ್ಮೆಯ ಹುಲಿ ವೇಷ, ಕೀಲು ಕುದುರೆ ,ಕುಣಿತ ಭಜನೆ
ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.