ಎಡಮಂಗಲ : ಪ್ರಾ. ಕೃ. ಪ ಸ ಸಂಘದ ವಾರ್ಷಿಕ ಮಹಾಸಭೆ

0

ಮುಂದಿನ ವರ್ಷ ನಮ್ಮ ಸಹಕಾರ ಸಂಘ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ : ರಾಮಕೃಷ್ಣರೈ ಮಾಲೆಂಗಿರಿ

ಎಡಮಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿಯವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೆ. 18ರಂದು ನಡೆಯಿತು.

ಮುರುಳ್ಯ ಸಹಕಾರಿ ಸಂಘವು ಎಡಮಂಗಲ ಸಂಘದೊಂದಿಗೆ ಒಟ್ಟಿಗೆ ವ್ಯವಹರಿಸುತ್ತಿದ್ದು, 24 ವರ್ಷಗಳ ಹಿಂದೆ ರೈತರ ಹಿತ ದೃಷ್ಟಿಯಿಂದ ಬೇರ್ಪಟ್ಟು ಎಡಮಂಗಲದಲ್ಲಿ ಸೊಸೈಟಿ ಆರಂಭವಾಗಿ ಸದಸ್ಯರ ಪ್ರೋತ್ಸಾಹದಿಂದ ಹಂತ ಹಂತವಾಗಿ ಬೆಳೆದು ಬಂದು ರೈತರ ಸದಸ್ಯರ ಬೇಡಿಕೆಯನ್ನು ಈಡೇರಿಸುತ್ತಾ ಒಂದು ಸ್ವಂತ ಕಟ್ಟಡ ಹೊಂದಿರುತ್ತದೆ.

ಸದಸ್ಯರು ಸಂಘವನ್ನು ಮುನ್ನಡೆಸಿ, ಸಹಕರಿಸಿದ ಪರಿಣಾಮ ಸಂಘವು ಯಶಸ್ವಿಯಾಗಿ ಗುರುತಿಸಿಕೊಂಡಿದೆ. ಮುಂದಿನ ವರ್ಷ ಅದ್ದೂರಿಯಾಗಿ ಬೆಳಿ ಹಬ್ಬ ಆಚರಿಸುವುದಾಗಿ ದೀಪ ಪ್ರಜ್ವಲನೆ ಮಾಡಿ ಅಧ್ಯಕ್ಷರ ಭಾಷಣದಲ್ಲಿ ಹೇಳಿದರು. ಚರ್ಚೆಯಲ್ಲಿ ರೈತರು ಭಾಗವಹಿಸಿ ಸಭೆ ಯಶಸ್ವಿಗೊಳಿಸಿದರು, ಸದಸ್ಯರ ಮಕ್ಕಳಾದ ಗಂಗಾಧರ. ಎಂ ಅವರ ಪುತ್ರ ಯೋಗೀಶ ಎಂ, ಎಸ್ ಎಲ್ ಸಿ ಯಲ್ಲಿ 86.24% ಹಾಗೂ ಮರೋಳಿ ಜಗದೀಶ ಎಂ ರವರ ಪುತ್ರ ಮೋಕ್ಷಿತ್ ಎಸ್ ಎಸ್ ಎಲ್ ಸಿ 83.68% ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಪ್ರಸ್ತುತ ಸಾಲಿನಲ್ಲಿ 35 ಲಕ್ಷ 25 ಸಾವಿರ 473ರೂ 93ಪೈಸೆ ಗಳಿಸಿ ಸದಸ್ಯರಿಗೆ ಶೇಕಡ 5% ಡಿವಿಡೆಂಟ್ ನೀಡಲಾಗುವುದು,

ಸದಸ್ಯರ ಯಶಸ್ವಿನಿಂದಾಗಿ ಸಂಘ ಅಭಿವೃದ್ಧಿ ಹೊಂದುತ್ತಿದೆ ಎಂದು ಅಧ್ಯಕ್ಷರು ಹೇಳಿದರು. ಉಪಾಧ್ಯಕ್ಷೆ ಶ್ರೀಮತಿ ಸುಮಾ ನೂಚಿಲ, ನಿರ್ದೇಶಕರುಗಳಾದ ಅವಿನಾಶ್ ದೇವರ ಮಜಲು ಪದ್ಮಯ್ಯ ನಾಯ್ಕ ಎಂ, ಕಮಲಾಕ್ಷ ಹೊಳೆಕೆರೆ, ತ್ಯಾಗರಾಜ ಎಚ್ಎಸ್, ಪುರಂದರ ರೈ ಬಳ್ಕಾಡಿ, ಚಂದ್ರಯ್ಯ ಮಜ್ಜಾರ್, ರಾಘವ ಪೂಜಾರಿ ಜಾಲ್ತಾರು, ಕಾಂತು ದೇವಸ್ಯ,

ಶ್ರೀಮತಿ ಚಂದ್ರಾವತಿ ಕಟ್ಟ, ಚಂದ್ರಶೇಖರ ಕೇರ್ಪಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ದೋಳ್ತಿಲ ಕಾರ್ಯ ಕಾರ್ಯಕ್ರಮ ನಿರೂಪಿಸಿ ವರದಿ ವಾಚಿಸಿ, ವಿಜಯ ರಾಮಣ್ಣ ಪ್ರಾರ್ಥಿಸಿ, ಸಿಬ್ಬಂದಿಗಳಾದ ನವೀನ್ ಕುಮಾರ್ ಕೆ ಆರ್, ಕುಶಾಲಪ್ಪ ನಾಯ್ಕ, ಕುಂಞಣ್ಣ ಗೌಡ, ಅಶ್ವತ್ ಜೆ, ಸೀತಾರಾಮ ಡಿ, ಕಾರ್ಯಕ್ರಮದಲ್ಲಿ ಸಹಕರಿಸಿದರು. ಅವಿನಾಶ್ ದೇವರ ವಂದಿಸಿದರು.