ಪೇರಾಲಿನಲ್ಲಿ ಪೂರ್ಣ ಪ್ರಮಾಣದ ಶಾಖೆ ನಡೆಸಲು ನಿರ್ಧಾರ
ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.೨೦ರಂದು ಸಹಕಾರಿ ಸಂಘದ ಅಮೃತ ಸಹಕಾರ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಅಧ್ಯಕ್ಷತೆ ವಹಿಸಿದ್ದರು. “ವರದಿ ವರ್ಷದಲ್ಲಿ ಸಂಸ್ಥೆಯು ೧೫೩ ಕೋಟಿ ೯೬ ಲಕ್ಷ ವ್ಯವಹಾರ ನಡೆಸಿದೆ. ಒಟ್ಟು ೩೬ ಲಕ್ಷದ ೭೮ ಸಾವಿರ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೬ ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಪೇರಾಲಿನಲ್ಲಿ ಸಹಕಾರಿ ಸಂಘದ ಶಾಖೆ ನಡೆಯುತ್ತಿದ್ದು ಅಲ್ಲಿ ಎಲ್ಲ ಸೌಲಭ್ಯಗಳನ್ನು ಸದಸ್ಯರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಘದ ಸದಸ್ಯರಾದ ಕುಶಾಲಪ್ಪ ಗೌಡ ಕುಕ್ಕೆಟ್ಟಿ, ಬಾಲಚಂದ್ರ ದೇವರಗುಂಡ, ಶ್ರೀಮತಿ ವಿನುತಾ ಪಾತಿಕಲ್ಲು, ದೇವದಾಸ್ ಕುಕ್ಕುಡೇಲು, ಮೋನಪ್ಪ ಶಿವಾಜಿನಗರ ಚರ್ಚೆಯಲ್ಲಿ ಭಾಗವಹಿಸಿದರು.
ಸಂಘದ ಉಪಾಧ್ಯಕ್ಷೆ ಜಲಜಾ ದೇವರಗುಂಡ, ನಿರ್ದೇಶಕರುಗಳಾದ ಈಶ್ವರಚಂದ್ರ ಕೆ.ಆರ್., ಪದ್ಮನಾಭ ಚೌಟಾಜೆ, ಭಾಸ್ಕರ ಮಿತ್ತಪೇರಾಲು, ಸುನಿಲ್ ಪಾತಿಕಲ್ಲು, ಚಂದ್ರಜಿತ್ ಮಾವಂಜಿ, ಸುರೇಶ್ ಕಣೆಮರಡ್ಕ, ಮೋನಪ್ಪ ನಾಯ್ಕ ಬೇಂಗತ್ತಮಲೆ, ಭಾರತಿ ಉಗ್ರಾಣಿಮನೆ, ಸರಸ್ವತಿ ಕಣೆಮರಡ್ಕ, ರವಿ ಚೇರದಮೂಲೆ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಪುತ್ಯ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ, ಆಂತರಿಕ ಲೆಕ್ಕಪರಿಶೋಧಕರಾದ ಅನಂತಕೃಷ್ಣ ಚಾಕೋಟೆ ವೇದಿಕೆಯಲ್ಲಿದ್ದರು. ವಿದ್ಯಾನಿಧಿ ವಿತರಣೆ, ನವೋದಯ ಸಂಘದವರಿಗೆ ಗೌರವ ಇದೇ ಸಂದರ್ಭದಲ್ಲಿ ನಡೆಯಿತು.