ಅದ್ದೂರಿಯ,ವಿಜ್ರಂಭಣೆಯ ಶೋಭಾಯಾತ್ರೆ
ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೋಶೋತ್ಸವ ಸೆ.19 ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ವಳಲಂಬೆ ಇಲ್ಲಿ ನಡೆಯಿತು.
ಬೆಳಗ್ಗೆ ಗಣಪತಿ ಪ್ರತಿಷ್ಠೆ, ಬಳಿಕ ಸಾಮೂಹಿಕ ಗಣಪತಿ ಹೋಮ ನಡೆದು, ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಕಾರ್ಯಕ್ರಮ ಜರುಗಿತು.
ಬಳಿಕ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೇಶಭಕ್ತಿಗೀತೆ, ಭಕ್ತಿಗೀತೆ, ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು. ಸಾರ್ವಜನಿಕ ಪುರುಷರಿಗೆ ಭಕ್ತಿಗೀತೆ, ಹಗ್ಗಜಗ್ಗಾಟ ಹಾಗೂ ಸಾರ್ವಜನಿಕ ಮಹಿಳೆಯರಿಗೆ – ಭಕ್ತಿಗೀತೆ, ಬಾಲ್ ಪಾಸಿಂಗ್, ಹಗ್ಗಜಗ್ಗಾಟ ಜರಗಿತು.
ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.
ವಿಜ್ರಂಭಣೆಯ ಶೋಭಾಯಾತ್ರೆ: ಶ್ರೀಗಣೇಶ ಮೂರ್ತಿಯ ವಿಜ್ರಂಭಣೆಯ ಶೋಭಾಯಾತ್ರೆ ನಡೆಯಿತು. ವಳಲಂಬೆಯಿಂದ ಹೊರಟ ಶೋಭಾಯಾತ್ರೆ ಗುತ್ತಿಗಾರಿನ ಮುತ್ತಪ್ಪ ನಗರದ ವರೆಗೆ ಸಾಗಿ ಮರಳಿ ಬಂದು ವಳಲಂಬೆ ದೇವಸ್ಥಾನ ಎದುರು ಭಾಗದ ನದಿಯಲ್ಲಿ ಗಣಪತಿ ಮೂರ್ತಿಯ ಜಲಸ್ತಂಭನ ನೆರವೇರಿತು. ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ನಾಸಿಕ್ ಬ್ಯಾಂಡ್, ಡಿ.ಜೆ ಸೌಂಡ್ ಸಿಸ್ಟಮ್, ಗೊಂಬೆ ಕುಣಿತ ಇದ್ದು ಮೆರವಣಿಗೆಗೆ ಮೆರುಗು ತಂದಿತ್ತು. ಸಾವಿರಕ್ಕೂ ಮಿಕ್ಕಿ ಭಕ್ತರು ಮೆರವಣಿಗೆಯಲ್ಲಿ ಸಾಗಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಬಲ್ನಾಡು ಕಟ್ಟೆ, ಗೌರವಾಧ್ಯಕ್ಷ. ಸತೀಶ್ ಮೂಕಮಲೆ, ಕೋಶಾಧಿಕಾರಿ ಲೋಹಿತ್ ಚೈಪೆ, ಸ್ಥಾಪಕಾಧ್ಯಕ್ಷ ವೆಂಕಟ್ ದಂಬೆಕೋಡಿ, ಸ್ಥಾಪಕ ಗೌರವಾಧ್ಯಕ್ಷ ಬಿ..ಕೆ ಬೆಳ್ಯಪ್ಪ ಗೌಡ ಹಾಗೂ ದೇವಸ್ಥಾನದ ಆಡಳಿತ ಮಂಡಳಿ, ಉಪ ಸಮಿತಿ, ಸಂಚಾಲಕರು, ಸದಸ್ಯರು ಕಾ ರ್ಯಕ್ರಮಕ್ಕೆ ಸಹಕರಿಸಿದರು.