ಸೆ.24 ರಂದು ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪದಗ್ರಹಣ ಸಮಾರಂಭ

0

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪದಗ್ರಹಣ ಸಮಾರಂಭವು ಸೆ.24 ರಂದು ಸುಳ್ಯ‌ದ ಜೆ.ಸಿ. ರೋಡ್ ನ ಒಕ್ಕೂಟದ ಸಭಾಭವನದಲ್ಲಿ ನಡೆಯಲಿದೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ ನೆರವೇರಿಸುವರು.‌ ಒಕ್ಕೂಟದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಹರಿಣಿ ಸದಾಶಿವ ಪದಗ್ರಹಣ ನಡೆಸುವರು. ಸಿ.ಡಿ.ಪಿ.ಒ. ಶೈಲಜಾ ದಿನೇಶ್, ನ.ಪಂ. ಸದಸ್ಯೆ ಕಿಶೋರಿ ಶೇಟ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ