ಸಂಕಷ್ಟದಲ್ಲಿರುವವರಿಗೆ ಸಹಾನುಭೂತಿ, ಅನುಕಂಪ ಹಾಗೂ ಸ್ಪಂದಿಸುವುದೇ ನಿಜವಾದ ಜೀವನ : ಮೋಹನ್ ದಾಸ್ ಸ್ವಾಮೀಜಿ

0

ಸಮಾಜದಲ್ಲಿ ದೀನ ದಲಿತರ ಸೇವೆಯನ್ನು ಮಾಡಿಕೊಂಡು ನಯ ವಿನಯದಿಂದ ಎಲ್ಲರೊಂದಿಗೆ ಬೆರೆತು ಸರಳ ಹಾಗೂ ನಿರಾಡಂಬ ಜೀವನವನ್ನು ನಡೆಸುತ್ತಿರುವವರು ಡಾlರವಿ ಕಕ್ಕೆ ಪದವು ಅವರು. ಒಬ್ಬ ಯುವಶಕ್ತಿ ಸಮಾಜದಲ್ಲಿ ಹೇಗಿರಬೇಕು ಎಂಬುದಕ್ಕೆ ರವಿ ಅವರೇ ಮಾದರಿ. ದಕ್ಷಿಣ ಕನ್ನಡ ಹಾಗೂ ಇತರ ಭಾಗಗಳ ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವಂತ ಜೀರ್ಣೋದ್ಧಾರ ಬ್ರಹ್ಮಕಲಶ ಸೇವೆಗಳಲ್ಲಿ ರವಿ ಕಕ್ಕೆ ಪದವುರವರ ಕೊಡುಗೆ ಇದ್ದೆ ಇರುತ್ತದೆ. ಅವರ ತಂದೆ ತಾಯಿ ಇಂತಹ ಮಗನನ್ನು ಪಡೆದಿದ್ದಾರೆ ಎಂದರೆ ಅದು ಅವರ ಪುಣ್ಯ ಎನ್ನಬೇಕು. ಎಂದು ಮಾಣಿ ಲ ಶ್ರೀಧಾಮದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಅವರು ನುಡಿದರು. ಸೆ‌.22 ಕ್ಕೆ ಸುಬ್ರಹ್ಮಣ್ಯಕ್ಕೆ ಕಾರ್ಯನಿಮಿತ್ತ ಹಾಗೂ ದೇವರ ದರ್ಶನಕ್ಕೆ ಆಗಮಿಸಿದ ಸ್ವಾಮೀಜಿಯವರು ರವಿಕಕ್ಕೆ ಪದವು ಅವರ ಕಚೇರಿಗೆ ಬಂದು ಮಾತನಾಡಿದರು. ತದನಂತರ ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಾಮೀಜಿಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಡಾlರವಿಕಕ್ಕೆ ಪದವು, ನಿರ್ದೇಶಕರುಗಳಾದ ರವೀಂದ್ರ ಕುಮಾರ ರುದ್ರಪಾದ ,ಮೋಹನ್ದಾಸ್ ರೈ ,ಮಣಿಕಂಠ ,ಸೀನಿಯರ್ ಚೇಂಬರ್ ಅಧ್ಯಕ್ಷ ವಿಶ್ವನಾಥ ನಡುತೋಟ, ಸಮಾಜ ಸೇವಕಿ ಪುಷ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.