ಕೋಲ್ಚಾರು ಶಾಲೆಯ ರಂಗಮಂದಿರ ನಿರ್ಮಾಣ ಕ್ಕೆ ವೇತನವನ್ನು ದೇಣಿಗೆ ನೀಡಿ ಮಾದರಿಯಾದ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಕುಕ್ಕುಜೆ

0

ಕೋಲ್ಕಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರ ನಿರ್ಮಾಣ ಕಾರ್ಯಕ್ಕೆ ಅದೇ ಶಾಲೆಯ
ಶಿಕ್ಷಕಿ ಜಲಜಾಕ್ಷಿ ಕುಕ್ಕುಜೆಯವರು ತನ್ನ ಎರಡು ತಿಂಗಳ ವೇತನ ರೂ. 1,30,500 ಲಕ್ಷ ದೇಣಿಗೆ ನೀಡುವ ಮೂಲಕ ತಾಲೂಕಿಗೆ ಮಾದರಿಯಾಗಿದ್ದಾರೆ.

ರಂಗಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು 12 ಲಕ್ಷ ಖರ್ಚುಅಂದಾಜಿಸಲಾಗಿದೆ.ಸರಕಾರದಿಂದ 3 ಲಕ್ಷ ಅನುದಾನ ಬಂದಿದೆ.
ಬಾಕಿ ಉಳಿದ ಮೊತ್ತ ದಾನಿಗಳ ನೆರವಿನಿಂದ ಕ್ರೋಢಿಕರಣ ಮಾಡಲಾಗಿದ್ದು ಅಂತಿಮ ಹಂತದ ಅಗತ್ಯ ಕೆಲಸ ಕಾರ್ಯಗಳಿಗೆ ಶಿಕ್ಷಕಿ ತನ್ನ ವೇತನವನ್ನು ನೆರವು ನೀಡಿರುತ್ತಾರೆ.
ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು ರವರಿಗೆ ಚೆಕ್ ನ್ನು ಹಸ್ತಾಂತರಿಸಿದರು.

ಮಕ್ಕಳಿಗೆ ಪಾಠ, ಪಠ್ಯೇತರ ಚಟುವಟಿಕೆಗೆ ಪ್ರೇರಣೆ ಜತೆಗೆ ಶಾಲೆಯಲ್ಲಿ ಸ್ಮಾರ್ಟ್ ತರಗತಿ, ಕಂಪ್ಯೂಟರ್, ಪ್ರಿಂಟರ್, ಶಾಲೆಗೆ ಸುಣ್ಣ ಬಣ್ಣ, ಚಿತ್ತಾರ, ಲೇಖನ ಸಾಮಗ್ರಿ, ಸಮವಸ್ತ್ರ, ಬ್ಯಾಗ್, ವಿದ್ಯಾಥಿವೇತನವನ್ನು ದಾನಿಗಳ ಮೂಲಕ ಸಂಗ್ರಹಿಸಿ ಮಕ್ಕಳಿಗೆ ವಿತರಿಸಿದ್ದಾರೆ. ಬಾಲವನ, ನೀರು ಶುದ್ಧೀಕರಣ ಯಂತ್ರ, ನಲಿಕಲಿ ಪೀಠೋಪಕರಣ ಹೀಗೆ ಶಾಲೆಯ ಭೌತಿಕ ಸೌಲಭ್ಯ ವಿದ್ಯಾರ್ಥಿಗಳಿಗೆ ಒದಗಿಸುವ ಮೂಲಕ ಖಾಸಗಿ ಶಾಲೆಗೆ ಹೋಲಿಕೆಯಾಗುವಂತೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಸಹಕಾರ ನೀಡುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಸಾರ್ವಜನಿಕ ವಲಯದಲ್ಲಿ ಅಪಾರ ಶ್ಲಾಘನೆ ವ್ಯಕ್ತವಾಗಿದೆ.