ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0


🔸 ರೂ.3.5 ಕೋಟಿಗೂ ಮಿಕ್ಕಿ ವ್ಯವಹಾರ


🔸 ರೂ.3.65 ಲಕ್ಷ ನಿವ್ವಳ ಲಾಭ

ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ 37ನೇ ವಾರ್ಷಿಕ ಸಾಮಾನ್ಯ ಸಭೆ ಸೆ.25.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷ ಚನಿಯಪ್ಪ ಕುಳ್ಳಕೋಡಿ
ಅಧ್ಯಕ್ಷತೆ ವಹಿಸಿದ್ದರು.ಸಂಘಧ ಸದಸ್ಯ ನಿವೃತ್ತ ಶಿಕ್ಷಕ ಜನಾರ್ಧನ ಗೌಡ ನೇರಳ ದೀಪ ಪ್ರಜ್ವಲನೆ ಗೊಳಿಸಿದರು.


ಸಂಘವು 2022-23 ಸಾಲಿನಲ್ಲಿ ಒಟ್ಟು ರೂ.3ಕೋಟಿ 63ಲಕ್ಷ 83,335 ವ್ಯವಹಾರ ನಡೆಸಿ ರೂ.3,65,942-53 ನಿವ್ವಳ ಲಾಭ ಗಳಿಸಿದೆ.ಪ್ರತೀ ಲೀಟರ್ ಗೆ 64 ಪೈಸೆ ಬೋನಸ್, ಶೇ.10 ಷೇರು ಡಿವಿಡೆಂಡ್ ನೀಡಲಿದ್ದೇವೆ. ಎಂದು ಸಂಘದ ಅಧ್ಯಕ್ಷ ಚನಿಯಪ್ಪ ಕುಳ್ಳಕೋಡಿ ಹೇಳಿದರು.


ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಮಾಹಿತಿ ನೀಡಿದರು.ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ ಸಿ , ಕೆ. ಆರ್ ಚಂದ್ರ ,ನವೀನ್ ಕೆಬ್ಲಾಡಿ, ಸತೀಶ್ ಬಿ ,ಉದಯ ಬಿ ,ನಾರಾಯಣ ನಾಯ್ಕ, ಶ್ರೀಮತಿ ಸಾವಿತ್ರಿ, ಶ್ರೀಮತಿ ಯಶೋದಾ ಬಿ.ಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

2022- 23 ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಯಶೋದಾ ಬಿ.ಸಿ. ಪ್ರಥಮ, ದೇವದಾಸ್ ಕೆಬ್ಲಾಡಿ ದ್ವಿತೀಯ, ಶ್ರೀಮತಿ ರಾಜೀವಿ ಪಿ ತೃತೀಯ ಸ್ಥಾನ ಪಡೆದಿದ್ದು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದಲ್ಲಿ 25 ವರುಷ ಅಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು ಸಂಘಕ್ಕೆ ಸ್ಟೀಲ್ ಕವಾಟು ಕೊಡುಗೆಯಾಗಿ ನೀಡಿದ
ಚಂದ್ರಶೇಖರ ಶಾಸ್ತ್ರಿ ಸಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.


“ಪಂಜದಲ್ಲಿ ಪಶು ವೈದ್ಯರಿಲ್ಲದೆ ಹೈನುಗಾರರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ”. ಎಂದು ದಾಮೋದರ ನೇರಳ, ಭಾಸ್ಕರ ನಾಯಕ್ ಹೇಳಿದರು.
“ಈ ಕುರಿತು ನಿರ್ಣಾಯಿಸಿ ಒಕ್ಕೂಟಕ್ಕೆ ಕಳುಹಿಸಿ ಸಮಸ್ಯೆ ಸರಿ ಪಡಿಸಲು ಪ್ರಯತ್ನಿಸುವ”. ಎಂದು ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಉತ್ತರಿಸಿದರು.
” ಹೆಚ್ಚು ಗಂಡು ಕರು ಆಗುತ್ತಿದ್ದು ಹೆಣ್ಣು ಕರು ಜನಿಸುವ ಸೆಮೆನ್ ಇದೆಯಾ “. ಎಂದು ದಾಮೋದರ ನೇರಳ ಪ್ರಶ್ನಿಸಿದರು. ” ಸೆಮೆನ್ ಇದೆ ಆದರೆ 90 ಪರ್ಸೆಂಟ್ ಅದು ಗ್ಯಾರೆಂಟಿ. ಬೇಕಾದವರು ಸಂಘಕ್ಕೆ ತಿಳಿಸಿ”. ಎಂದು ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ವನಿತಾ ಕರಿಮಜಲು ಪ್ರಾರ್ಥಿಸಿದರು. ಚಂದ್ರಶೇಖರ ಶಾಸ್ತ್ರಿ ಸಿ ಪ್ರಾಸ್ತಾವಿಕಗೈದರು. ಚನಿಯಪ್ಪ ಕುಳ್ಳಕೋಡಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಸಿ ವರದಿ ವಾಚಿಸಿದರು. ಉದಯ ಬಿ ವಂದಿಸಿದರು. ಸಿಬ್ಬಂದಿಗಳಾದ ಮಧುಸೂದನ ಕೆ.ಆರ್, ಶ್ರೀಮತಿ ವನಿತಾ ಕರಿಮಜಲು, ಪದ್ಮಯ್ಯ ನಾಯ್ಕ ಕೆಮ್ಮೂರು ಸಹಕರಿಸಿದರು.