ಖುರಾನ್ ಸಂಪೂರ್ಣ ಕಂಠಪಾಠ ಮಾಡಿ ಹಾಫಿಲ್ ಪದವಿ ಪಡೆದ ಮೊಗರ್ಪಣೆ ನೂರೇ ಮದೀನಾ ಹಿಫ್ಲ್ ವಿದ್ಯಾರ್ಥಿ: ಮೊಹಮ್ಮದ್ ರಾಫಿ

0

ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಆಶ್ರಯದಲ್ಲಿ ನಡೆಯುತ್ತಿರುವ ಹಾಫಿಲ್ ಸೌಕತ್ ಅಲಿ ಸಖಾಫಿ ರವರ ನೇತೃತ್ವದ ನೂರೇ ಮದೀನಾ ಹಿಫ್ಲ್ ಮತ್ತು ದರ್ಸ್ ನ ವಿದ್ಯಾರ್ಥಿ ಹಾಫಿಲ್ ಮೊಹಮ್ಮದ್ ರಾಫಿ ತಮ್ಮ ಎರಡೂವರೆ ವರ್ಷದ ಖುರಾನ್ ಕಲಿಕೆಯಲ್ಲಿ ಖುರಾನ್ ಸಂಪೂರ್ಣ ಕಂಠಪಾಠ ಮಾಡಿ ಹಾಫಿಲ್ ಪದವಿಯನ್ನು ಪಡೆದುಕೊಂಡಿದ್ದಾರೆ.

ತಮ್ಮ 16ನೇ ವಯಸ್ಸಿನಲ್ಲಿ ಹಾಫಿಲ್ ಪದವಿಯನ್ನು ಪಡೆದುಕೊಂಡ ಈ ಬಾಲಕ ಮೂಲತ: ಕೊಡಗು ಜಿಲ್ಲೆಯ ಸಿದ್ದಾಪುರ ಗ್ರಾಮದ ದಿ.ಹನೀಫ್ ಹಾಗೂ ರಮ್ಲಾ ದಂಪತಿಯವರ ಪುತ್ರರಾಗಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಈ ಬಾಲಕ ದರ್ಸ್ ವಿದ್ಯಾಭ್ಯಾಸಕ್ಕೆ ಬಂದಿದ್ದು ಖುರಾನ್ ಕಲಿಕೆಯೊಂದಿಗೆ ಭೌತಿಕ ಶಿಕ್ಷಣವನ್ನು ಪಡೆಯುತ್ತಿದ್ದು ಎಸ್ ಎಸ್ ಎಲ್ ಸಿ ತರಗತಿಯಿಂದ ಉತ್ತೀರ್ಣರಾಗಿ ಇದೀಗ ಪ್ರಥಮ ಪಿಯುಸಿಯ ವ್ಯಾಸಾಂಗ ಮಾಡುತ್ತಿದ್ದಾರೆ.

ನೂರೇ ಮದೀನಾ ಹಿಫ್ಲ್ ಕಲಿಕೆಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ಖುರಾನ್ ಕಂಠಪಾಠ ಮಾಡುತ್ತಿದ್ದು ಅತಿ ಶೀಘ್ರದಲ್ಲಿ ಇನ್ನೂ ಮೂರು ವಿದ್ಯಾರ್ಥಿಗಳು ಹಾಫಿಲ್ ಪದವಿಯ ಹಂತದಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.
ಹಾಫಿಲ್ ಮೊಹಮ್ಮದ್ ರಾಫಿ ಅವರ ಈ ಸಾಧನೆಯನ್ನು ಮೆಚ್ಚಿ ಸ್ಥಳೀಯ ಜಮಾಅತ್ ಕಮಿಟಿ ಶ್ಲಾಘನೆ ವ್ಯಕ್ತಪಡಿಸಿದೆ.