ಪೆರಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಹಾದೇವ ಪ್ರಭು ಚಾಮರಾಜನಗರಕ್ಕೆ ವರ್ಗಾವಣೆ

0

ಪೆರಾಜೆ ಗ್ರಾಮ ಪಂಚಾಯತಿಯಲ್ಲಿ ಕಳೆದ ಐದೂವರೆ ವರ್ಷ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಚಾಮರಾಜನಗರದ ಮಹದೇವಪ್ರಭು ವಿ.ಕೆ. ಅವರು ತಮ್ಮ ಸ್ವಂತ ಊರಾದ ಚಾಮರಾಜನಗರಕ್ಕೆ ವರ್ಗಾವಣೆಯಾಗಿದ್ದಾರೆ.
ಮಹಾದೇವ ಪ್ರಭು ಅವರು
ಕಳೆದ ಒಂದು ವರ್ಷದಿಂದ ಚೆಂಬು ಗ್ರಾಮ ಪಂಚಾಯತಿಯಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪೆರಾಜೆ ಗ್ರಾಮ ಪಂಚಾಯತಿಗೆ ಕೊಡಗಿನ ಶುಂಠಿಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ ಎಂಬವರು ಬರಲಿದ್ದಾರೆ ಎಂದು ತಿಳಿದುಬಂದಿದೆ.