ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸುಳ್ಯದ ಕೊಡಿಯಾಲಬೈಲಿನ ಮಹಾತ್ಮಾ ಗಾಂಧಿ ಶಾಲಾ ಕ್ರೀಡಾಂಗಣದಲ್ಲಿ ಅ.26 ಮತ್ತು 27ರಂದು ನಡೆಯಲಿರುವ ತಾಲೂಕು ಮಟ್ಟದ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಸುಳ್ಯದ ಸೈಂಟ್ ಜೋಸೆಫ್ ಶಾಲೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಸಂಚಾಲಕ ರೆ. ಫಾ. ವಿಕ್ಟರ್ ಡಿಸೋಜ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಶುಭಹಾರೈಸಿದರು‌.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಬಿನೋಮ, ಪೋಷಕ ಸಂಘದ ಅಧ್ಯಕ್ಷ ಜೆ‌.ಕೆ. ರೈ, ಭವ್ಯ, ಆರ್ಥಿಕ ಸಮಿತಿಯ ಪ್ರಸನ್ನ ಪೀಟರ್, ಕೆ.ಟಿ. ವಿಶ್ವನಾಥ, ಡೇವಿಡ್ ದೀರಾ ಕ್ರಾಸ್ತ, ನವೀನ್ ಮಚಾದೋ, ಅಂತೋನಿ ಮೇರಿ, ಶಿಕ್ಷಕರುಗಳಾದ ಕೊರಗಪ್ಪ, ಪುಷ್ಪವೇಣಿ, ಅನಿತಾ, ಶೋಭಾ, ಉಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.