ಅರಂತೋಡು: ಗಾಳಿ ಮಳೆಗೆ ತೆಂಗಿನಮರ ಬಿದ್ದು ಶಾಲಾ ಕಟ್ಟಡಕ್ಕೆ ಹಾನಿ

0

ವಿಪರೀತವಾಗಿ ಸುರಿದ ಗಾಳಿ ಮಳೆಗೆ ಶಾಲಾ ಆವರಣದಲ್ಲಿದ್ದ ತೆಂಗಿನಮರ ಬಿದ್ದು, ಶಾಲಾ ಕಟ್ಟಡಕ್ಕೆ ಹಾನಿಯಾದ ಘಟನೆ ಅರಂತೋಡುವಿನಲ್ಲಿ ಅ.11ರಂದು ರಾತ್ರಿ ಸಂಭವಿಸಿದೆ.

ರಾತ್ರಿ ಸುರಿದ ಗಾಳಿ ಮಳೆಗೆ ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಬಳಿಯಿದ್ದ ತೆಂಗಿನಮರ ಶಾಲಾ ಕಟ್ಟಡದ ಮೇಲೆ ಬಿದ್ದ ಪರಿಣಾಮವಾಗಿ ಶಾಲಾ ಕಟ್ಟಡ ಹಾಗೂ ಹಂಚುಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.