ಹರಿಹರೇಶ್ವರ ಕಲಾ ಮಂದಿರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಭೆ

0

ಯೋಜನೆಯನ್ನು ಬೇರೆಬೇರೆ ಹೆಸರುಗಳಿಂದ ಜಾರಿ ಮಾಡಲು ಹೊರಟ ಸರ್ಕಾರ: ಕಿಶೋರ್ ಶಿರಾಡಿ
.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ರಿ ಸುಬ್ರಹ್ಮಣ್ಯ ವಲಯ ಇದರ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ಹರಿಹರೇಶ್ವರ ಕಲಾ ಮಂದಿರದಲ್ಲಿ ಇಂದು (ಸೆ.22) ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಿಶೋರ್ ಕುಮಾರ್ ಕೂಜುಗೋಡು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಮಾತನಾಡಿದರು. ಈ ಯೋಜನೆಯನ್ನು ಸರಕಾರ ಬೇರೆಬೇರೆ ಹೆಸರುಗಳಿಂದ ಜಾರಿ ಮಾಡಲು ಹೊರಟಿದೆ. ಇದರಿಂದ ಜನರ ಕೃಷಿ ಭೂಮಿಗೆ ತೊಂದರೆ ಆಗುತ್ತದೆ. ಒಂದೆಡೆ ಪುಷ್ಪಗಿರಿ ವನ್ಯದಾಮ, ಹುಲಿಸಂರಕ್ಷಣೆ. ಗ್ರೇಟರ್ ತಲಕಾವೇರಿ. ಪಶ್ಚಿಮ ಘಟ್ಟ ಸಂರಕ್ಷಣೆ ಎಂಬ ಹೆಸರುಗಳನಿಟ್ಟು ಕೃಷಿ ಭೂಮಿ ಯನ್ನು ಅರಣ್ಯೀಕರಣ ಮಾಡಲು ಹೊರಟಿದೆ. ಇದರಿಂದ ಜನರ ಬದುಕು ಬಿದಿಪಾಲಾಗುವುದು ನಿಶ್ಚಿತ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಮುಂದೆ ಹೋರಾಡುವ ಅನಿವಾರ್ಯತೆ ಇದೆ ಎಂದರು..ನಮ್ಮ ಪ್ರಮುಖ ಬೇಡಿಕೆ ಕಸ್ತೂರಿ ರಂಗನ್ ವರದಿ ಜಾರಿ ಬೇಡವೇ ಬೇಡ
ಇದರಿಂದ ಮೂಲಸೌಕರ್ಯಕ್ಕೆ ದಕ್ಕೆ ಇದೆ. ರೈತರು ಕೃಷಿಭೂಮಿ ಕಳೆದು ಕೊಂಡು ನಿರಾಶ್ರಿತ ರಾಗುವ ಭೀತಿ ಇದೆ ಎಂದರು.

: ಪಶ್ಚಿಮ ಘಟ್ಟ ಜನವಸತಿ ಪ್ರದೇಶಗಳ ಗಡಿ ಗುರುತು. ಗ್ರಾಮಗಳನ್ನು ಜಂಟಿ ಸರ್ವೇ ಮಾಡುವುದು, ಗೊಮಾಳ ನಡುತೋಪು(ನಾಗಬನ ) ಕುಮ್ಕಿ ಕಾನಬಾಣೆ ಗೆ ಹಕ್ಕು ಬೇಕು, ಕಂದಾಯ ಭೂಮಿ ಸರಕಾರಿ ಕಟ್ಟಡ ಗೋಸ್ಕರ ಜಾಗ ಕಾಯ್ದಿರಿಸಬೇಕು. ಎಂದು ಸರ್ಕಾರಕ್ಕೆ ಭೇಡಿಕೆ ಇಟ್ಟರು.

ಸುಳ್ಯ ತಾಲೂಕು ಯೋಜನಾಧಿಕಾರಿ ಮಾದವ ಗೌಡ ಮಾತನಾಡಿ ಈ ಭಾಗದ ಜನರ ಸಮಸ್ಯೆ ಗಳನ್ನು ಪೂಜ್ಯ ವೀರೇಂದ್ರ ಹೆಗ್ಗಡೆ ಯವರ ಗಮನಕ್ಕೆ ತರುವ ಕೆಲಸ ಮಾಡುವ ಎಂದು ತಿಳಿಸಿದರು. ಈ ಭಾಗದಲ್ಲಿ ನೂರಾರು ಸಂಘ ಗಳು ಯೋಜನೆ ಇಂದ ಸಾಲ ಸೌಲಭ್ಯ ಪಡೆದು ಕೃಷಿ ಮಾಡುತ ಅಭಿವೃದ್ಧಿ ಹೊಂದಿವೆ ಈಗ ಕಸ್ತೂರಿ ರಂಗನ್ ವರದಿ ಜನರಲ್ಲಿ ಭಯ ಮೂಡಿಸಿದೆ . ಈ ಮಾರಕ ವರದಿ ಜಾರಿ ಯಾದರೆ ಈ ತಾಲೂಕಿನ ಕೆಲವು ಗ್ರಾಮದ ಜನಗಳಿಗೆ ಬದುಕಲು ಕಷ್ಟ ವಾಗಬಹು ಎಂದರು. ವೀರೇಂದ್ರ ಹೆಗ್ಗಡೆಯವರ ಮುಖಾಂತರ ಸರಕಾರದ ಎಲ್ಲಾ ಶಾಸಕರು ಸಚಿವರು ಸಂಸದರಿಗೆ ಮನವಿ ಸಲ್ಲಿಸಿ ಈ ಯೋಜನೆ ಕೈ ಬಿಡುವಂತೆ ಮನವಿ ಮಾಡಲಾಗುವುದು ಎಂದರು

ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಮಾತನಾಡಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಅನಿವಾರ್ಯ ರೈತರಿಗೆ ಇದೆ. ರೈತರ ಗ್ರಾಮಗಳ ಉಳಿವಿಗಾಗಿ ಹೋರಾಟ ಮಾಡುವ ಸಂದರ್ಭ ನಾವೆಲ್ಲರೂ ಒಂದಾಗಿ ಕೈ ಜೋಡಿಸುವ ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ಹರಿಹರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ್ ಕುಮಾರ್ ಅಂಙಣ, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಕೃಷ್ಣಪ್ಪ ಯಂ, ಹರ್ಷ ಗೌಡ ಪಾಲ್ತಾಡು, ಸತೀಶ್ ಕೆರೆಕ್ಕೋಡಿ, ತೀರ್ಥರಾಮ ದೋಣಿಪಳ್ಳ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಸುಬ್ರಹ್ಮಣ್ಯ ವಲಯದ ಎಲ್ಲ ಸಂಘ ಗಳ ಸದಸ್ಯರು , ಸೇವಾಪ್ರತಿನಿಧಿಗಳು, ಬಾಧಿತ ಗ್ರಾಮಗಳ ಜನಪ್ರತಿನಿದಿನಗಳು, ಊರಿನ ಕೆಲವು ಹಿರಿಯರು ಭಾಗವಹಿಸಿ ಸಲಹೆ ಸೂಚನೆ ನೀಡಿದರು. ತೀರ್ಥರಾಮ ದೋಣಿಪಳ್ಳ ಸ್ವಾಗತಿಸಿ, ಸತೀಶ್ ಕೆರೆಕೋಡಿ ವಂದನಾರ್ಪಣೆ ಮಾಡಿದರು. ಗಿರೀಶ್ ಕುಮಾರ್ ಹೆರ್ಕಜೆ ನಿರೂಪಿಸಿದರು .