ಮಂತ್ರ ದೇವತೆ ದೈವದ ತುಳು ಭಕ್ತಿಗೀತೆ ಬಿಡುಗಡೆ

0

ತುಳುನಾಡಿನ ಕಾರ್ಣಿಕ ದೈವವಾದ ಮಂತ್ರ ದೇವತೆ ದೈವದ ‘ಮಂತ್ರದೇವತೆ ಉಡಲೊರ್ಮೆ ಸುಗಿಪುವೆ’ ಎಂಬ ತುಳು ಭಕ್ತಿ ಗೀತೆಯೂ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಮಣ್ಯ ಇಲ್ಲಿ ಬಿಡುಗಡೆಗೊಂಡಿತು.

ಈ ಭಕ್ತಿಗೀತೆಯನ್ನು ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ||ದಿನೇಶ್ ಪಿ.ಟಿ ಇವರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಸಾಂಸ್ಕೃತಿಕ ಸೌರಭ ಇದರ ಮೇಲ್ವಿಚಾರಕರಾದ ವಿನ್ಯಾಸ್ ಹೊಸೊಳಿಕೆ ಹಾಗೂ ಭಕ್ತಿಗೀತೆಯ ಗಾಯಕಿಯರ ಪೋಷಕರಾದ ಪ್ರಮೀಳಾ.ಕೆ, ಶೋಭಿತಾ ಹಾಗೂ ನೀಲಪ್ಪ ಗೌಡ ಎಂ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮಯೂರಿ.ಎಂ.ಜಿ,ಸಿಂಚನ.ಪಿ ಮತ್ತು ಭಾರತಿ.ಎಂ.ಜಿ . ಪ್ರಾರ್ಥಿಸಿ, ಧನ್ಯ.ಎ ರವರು ಸ್ವಾಗತಿಸಿ, ರೂಪಲತಾರವರು ವಂದಿಸಿದರು. ಕಾರ್ಯಕ್ರಮವನ್ನು ದೀಕ್ಷಾ.ಹೆಚ್.ವಿ . ನಿರೂಪಿಸಿದರು.


ನಿರಂಜನ್ ಕಡ್ಲಾರು ಅವರ ಸಾಹಿತ್ಯವಿರುವ ಈ ಭಕ್ತಿಗೀತೆಗೆ ಕೆ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿನಿಯರಾದ ಅಂಕಿತಾ ಆಚಾರ್ಯ ಕಡ್ಲಾರು ಮತ್ತು ಅನ್ವಿತಾ ಗೌಡ ಮುಗೇರು ಇವರ ಗಾಯನವಿದೆ ಶರತ್ ಬಿಳಿನೆಲೆ ಇವರ ಸಂಗೀತವಿದ್ದು ಹಾಗೂ ಇಂದುಧರ ಹಳೆಯಂಗಡಿ ಇವರ ಸಂಕಲನವಿದೆ. ಈ ಭಕ್ತಿಗೀತೆಯನ್ನು N A Times ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.