ಅ.17 – 24: ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.17ರಿಂದ ಅ.24ರವರೆಗೆ ಜರುಗಲಿದೆ.

ನವರಾತ್ರಿ ಉತ್ಸವದ ಪ್ರಯುಕ್ತ ಅ.17ರಂದು ಬೆಳಿಗ್ಗೆ ಕದಿರು ವಿನಿಯೋಗ, ಮಧ್ಯಾಹ್ನ ದೇವರಿಗೆ ಮಹಾಪೂಜೆ, ನವಾನ್ನ ಭೋಜನ, ಅ.20ರಂದು ದೇವಾಲಯದಲ್ಲಿ ಶ್ರೀ ದುರ್ಗಾ ತ್ರಿಕಾಲ ಪೂಜೆ ಮತ್ತು ಶುಕ್ಲಪಕ್ಷದ ಷಷ್ಠಿ ಕಾರ್ಯಕ್ರಮ ನಡೆಯಲಿದೆ.
ಅ.23ರಂದು ಮಹಾನವಮಿ ಪ್ರಯುಕ್ತ ಆಯುಧಪೂಜೆ ಹಾಗೂ ಅ.24ರಂದು ಶ್ರೀ ಕಾರ್ತಿಕೇಯ ಯುವಸೇವಾ ಸಮಿತಿಯ ವತಿಯಿಂದ ಶಾರದಾಂಬ ಉತ್ಸವ ನಡೆಯಲಿದೆ.