ಸುಬ್ರಹ್ಮಣ್ಯದಲ್ಲಿ ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0


ಸುಬ್ರಹ್ಮಣ್ಯದಲ್ಲಿ ಅ.29 ರಂದು ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸುಮಾರು 25 ಸ್ವಯಂಸೇವಕರನ್ನು ಒಳಗೊಂಡ ತಂಡವು ಕುಮಾರಧಾರ ಸ್ಥಾನಘಟ್ಟ, ಮುಖ್ಯ ದ್ವಾರದ ಇಕ್ಕೆಲಗಳಲ್ಲಿ, ಹಾಗೂ ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡಿತು.

ಕುಮಾರಧಾರ ಸ್ಥಾನಘಟ್ಟದ ಬಳಿ, ದ್ವಾರದ ಅಕ್ಕ ಪಕ್ಕದಲ್ಲಿ ,ಹಾಗೂ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಕಸಗಳು ಬಹಳಷ್ಟು ತುಂಬಿದ್ದವು. ಇದನ್ನು ಮನಗಂಡ ರವಿ ಕಕ್ಕೆ ಪದವು ಅವರು ತನ್ನ ಸಮಾಜ ಸೇವ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡರು.